ಕೊಕ್ಕರ್ಣೆ : ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಹರಿಖಂಡಿಗೆಯಲ್ಲಿ 11ನೇ ವರ್ಷದ ವಿಜಯರಥೋತ್ಸವ ಜರುಗಲಿದೆ. ಜ.30ರಂದು ಬೆಳಗ್ಗೆ ಶ್ರೀದೇವರ ಪ್ರಾರ್ಥನೆ, ಮೃತ್ತಿಕಾ ಪೂಜೆ, ಅಂಕುರಾರೋಹಣ, ಮಹಾಪೂಜೆ, ಸಮಾರಾಧನೆ, ಪ್ರಸಾದ ವಿತರಣೆ, ಫೆ.2ರಂದು ಬೆಳಗ್ಗೆ ಶ್ರೀ ದೇವರ ಪ್ರಾರ್ಥನೆ, ಯಜ್ಞಾರಂಭ, ಮಧ್ಯಾಹ್ನ ಮಹಾಪೂಜೆ, ಸಮಾರಾಧನೆ, ರಾತ್ರಿ ಪಲ್ಲಕ್ಕಿ ಉತ್ಸವ, ಗರುಡವಾಹನ ಭಾಂಡಿ ಉತ್ಸವ, ವಸಂತ ಪೂಜೆ, ಫೆ.3ರಂದು ಬೆಳಗ್ಗೆ ಸಾನಿಧ್ಯ ಹವನ, ಮಧ್ಯಾಹ್ನ ಮಹಾಪೂಜೆ, ಸಮಾರಾಧನೆ, ರಾತ್ರಿ ಪಲ್ಲಕ್ಕಿ ಉತ್ಸವ, ಹನುಮಂತವಾಹನ ಭಾಂಡಿ ಉತ್ಸವ, ವಸಂತಪೂಜೆ.
ಫೆ.4ಕ್ಕೆ ಬೆಳಗ್ಗೆ ಶ್ರೀ ದೇವರ ಪ್ರಾರ್ಥನೆ, ಪಂಚಾಮೃತ ಅಭಿಷೇಕ, ಶತಕಲಶಾಭಿಷೇಕ, ಕನಕಾಭಿಷೇಕ, ಗಂಗಾಭಿಷೇಕ, ಸಾನಿಧ್ಯ ಹವನ, ಮಹಾಪೂಜೆ, ಶ್ರೀ ದೇವರು ಯಜ್ಞಮಂಟಪಕ್ಕೆ ಆಗಮನ, ಮಹಾಪೂರ್ಣಾಹುತಿ, ಮಧ್ಯಾಹ್ನ 3.30ಕ್ಕೆ ಶ್ರೀ ದೇವರ ವಿಜಯರಥಾರೋಹಣ, ಸಮಾರಾಧನೆ, ರಾತ್ರಿ ಚಂದ್ರಮಂಡಲೋತ್ಸವ, ವಿಜಯರಥೋತ್ಸವ, ಸುಡುಮದ್ದು ಪ್ರದರ್ಶನ, ಚಂದ್ರಮಂಡಲೋತ್ಸವ, ಪಲ್ಲಕ್ಕಿ ಉತ್ಸವ, ವಸಂತ ಪೂಜೆ, ಅಷ್ಟಾವಧಾನ ಸೇವೆ, ಪ್ರಸಾದ ವಿತರಣೆ, ಫೆ.5ಕ್ಕೆ ಸಾನಿಧ್ಯ ಕಲಶ, ಸಂಪ್ರೋಕ್ಷಣೆ, ಹಗಲೋತ್ಸವ, ಮಧ್ಯಾಹ್ನ ಮಹಾಪೂಜೆ, ಸಮಾರಾಧನೆ, ರಾತ್ರಿ ಪಲ್ಲಕ್ಕಿ ಉತ್ಸವ, ಶೇಷವಾಹನ ಭಾಂಡಿ ಉತ್ಸವ, ವಸಂತ ಪೂಜೆ.
ಫೆ.6ರಂದು ಮಧ್ಯಾಹ್ನ ಮಹಾಪೂಜೆ, ಸಮಾರಾಧನೆ, ರಾತ್ರಿ ಲಾಲಕಿ ಉತ್ಸವ, ವಸಂತ ಪೂಜೆ, ಪ್ರಸಾದ ವಿತರಣೆ, ಫೆ.7ರಂದು ಮಧ್ಯಾಹ್ನ ಮಹಾಪೂಜೆ, ಸಮಾರಾಧನೆ, ರಾತ್ರಿ ಲಾಲಕಿ ಉತ್ಸವ, ವಸಂತ ಪೂಜೆ, ಪ್ರಸಾದ ವಿತರಣೆ, ಹರಿಖಂಡಿಗೆಯ ಭಜಕರಿಂದ ಭಜನೆ ಸೇವೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಎಂ.ದಿನೇಶ್ ಪೈ ಮುನಿಯಾಲು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.