ಅಂಕೋಲಾ: ವೃತ್ತಿಯಲ್ಲಿ ಬದಲಾವಣೆ ಆಗಬೇಕಾದರೆ, ಸಮಾಜದ ಅಭಿವೃದ್ಧಿಗಾಗಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದು ಅತ್ಯಾವಶ್ಯ. ಪ್ರತಿಭಾ ಪುರಸ್ಕಾರ ಪಡೆದ ವಿದ್ಯರ‍್ಥಿಗಳು ಭವಿಷ್ಯದಲ್ಲಿ ಉತ್ತಮ ಸ್ಥಾನಗಳಿಸಿದ ಬಳಿಕ ತಮ ಗೆ ನೆರವು ನೀಡಿದ ಸಮಾಜದ ಋಣ ತೀರಿಸಬೇಕು ಎಂದು ಮೀನುಗಾರಿಕೆ ಮತ್ತು ಉ.ಕ. ಉಸ್ತುವಾರಿ ಸಚಿವ ಮಂಕಾಳ ಎಸ್.ವೈದ್ಯ ಹೇಳಿದರು.
ಉತ್ತರ ಕನ್ನಡ ಜಿಲ್ಲಾ ಹರಿಕಂತ್ರ ಮಹಾಜನ ಸಂಘ, ಕಾರವಾರ ಮತ್ತು ಅಂಕೋಲಾ ತಾಲೂಕಾ ಹರಿಕಂತ್ರ ಮಹಾಜನ ಸಂಘದವರು ಇಲ್ಲಿನ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ಭಾನುವಾರ ಆಯೋಜಿಸಿದ 18ನೇ ವರ್ಷದ ಪ್ರತಿಭಾ ಪುರಸ್ಕಾರ, ಪ್ರತಿಭಾವಂತರಿಗೆ ಸನ್ಮಾನ ಕರ‍್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಶಿಕ್ಷಣ ಕಲಿಯಲು ಕೊರತೆ ಇದ್ದರೆ, ಅವರಿಗೆ ಸಹಾಯ ಮಾಡಲು ನಿಮ್ಮ ಹಿಂದೆ ನಾನು ಇರುತ್ತೇನೆ. ಒಟ್ಟಾರ ನಮ್ಮ ಸಮುದಾಯದ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದು ಬೇರೆ ಬೇರೆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ಜತೆ ಉನ್ನತ ಮಟ್ಟದ ಅಧಿಕಾರಿಯಾಗಲಿ ಎಂದರು.
ಕಾರವಾರ-ಅಂಕೋಲಾ ಕ್ಷೇತ್ರ ಶಾಸಕ ಸತೀಶ ಕೆ.ಸೈಲ್ ಮಾತನಾಡಿ, ಹರಿಕಂತ್ರ ಸಮಾಜವು ಶೈಕ್ಷಣಿಕವಾಗಿ ಅಭಿವೃದ್ಧಿಯಾಗಬೇಕಾದರೆ ಪಾಲಕರು ಕಡ್ಡಾಯವಾಗಿ ಶಿಕ್ಷಣ ನೀಡಬೇಕು.
ಸಮಾಜದ ಪ್ರಮುಖರು ಸಹ ಪ್ರತಿಭಾವಂತರನ್ನು ಗುರುತಿಸಿ ರ‍್ಥಿಕವಾಗಿ ಸಹಕರಿಸಿಬೇಕು ಎಂದರು. ಉ.ಕ.ಜಿಲ್ಲಾ ಹರಿಕಂತ್ರ ಮಹಾಜನ ಸಂಘದ ಗೌರವಾಧ್ಯಕ್ಷ ಗಣಪತಿ ಆರ್.ಮಾಂಗ್ರೆ ಮಾತನಾಡಿ, ನಮ್ಮ ಸಮೂದಾಯದವರು ಅಕ್ಷರಕ್ರಾಂತಿ ಮಾಡಿಬೇಕಾದರೆ ಉನ್ನತ ಮಟ್ಟದ ಶಿಕ್ಷಣ ನೀಡುವಲ್ಲಿ ತಂದೆ-ತಾಯಿ ಅವರ ಪಾತ್ರ ಬಹಳ ದೊಡ್ಡದು.
ಈಗ ನೋಡಿದರೆ ಈ ಹಿಂದಿನಂತೆ ನಮ್ಮಲ್ಲಿ ಶೇ.95 ಹೆಚ್ಚು ಅಂಕ ಪಡೆ ಯುವ ಪ್ರತಿಭಾವಂತ ಮಕ್ಕಳನ್ನು ಕಾಣಬಹುದಾಗಿದೆ. ಇದಕ್ಕೆಲ್ಲಾ ನಮ್ಮ ಹರಿಕಂತ್ರ ಮಹಾಜನ ಸಂಘವು ಕಳೆದ 18 ವರ್ಷದ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಾ ಬಂದಿದೆ ಎಂದರು. ವಿಪ ಸದಸ್ಯ ಗಣಪತಿ ಡಿ. ಉಳ್ವೇಕರ್, ಉ.ಕ.ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್, ಬೆಂಗಳೂರು ಶಾಂತಿ ಹಾಸ್ಪಿಟಲ್ ಸೆಂಟರ್‌ನ ಮುಖ್ಯ ಔಷಧಿ ವಿತಕರ ಸುಭಾಷ ಪಿ. ಕೇಣಿಕರ್ ಸೇರಿದಂತೆ ಹಲವರು ಮಾತನಾಡಿದರು.
ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕ ಸತೀಶ ಸೈಲ್, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಂಕರ ಹರಿಕಂತ್ರ, ವಕೀಲರಾದ ರಾಜು ಹರಿಕಂತ್ರ ರಾಮನಗುಳಿ, ಮಹೇಶ ಹರಿಕಂತ್ರ, ಅಶೋಕ ಹರಿಕಂತ್ರ, ಮೀನಾಕ್ಷಿ ದರ‍್ಗೇಕರ್, ಉದ್ಯಮಿ ಗಣೇಶ ಹರಿಕಂತ್ರ, ಆರಕ್ಷಕ ಬಾಬು ಕೇಣಿಕರ ಸೇರಿದಂತೆ ಪ್ರತಿಭಾವಂತರಿಗೆ ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಿ ಸಲಾಯಿತು.
ಹರಿಕಂತ್ರ ಮಹಾಜನ ಸಂಘದ ವಿವಿಧ ತಾಲೂಕಾ ಅಧ್ಯಕ್ಷರಾದ ಹೂವಾ ಖಂಡೇಕರ್, ಜಗದೀಶ ಹರಿ ಕಂತ್ರ ನುಶಿಕೋಟೆ, ರಾಘು ಹರಿಕಾಂತ ಭಟ್ಕಳ, ಸುರೇಶ ಹರಿಕಂತ್ರ ಹೊನ್ನಾವರ, ಜಿಲ್ಲಾ ಸಂಘದ ಉಪಾಧ್ಯಕ್ಷ ಆರ್.ಎಸ್.ಆಂದ್ಲೆಮನೆ, ಕರ‍್ಯರ‍್ಶಿ ಶ್ರೀಕಾಂತ ದರ‍್ಗೇಕರ್, ಈಶ್ವರ ಹರಿಕಂತ್ರ, ಪ್ರಮುಖರಾದ ಡಾ.ವೆಂಕಟೇಶ ಕೇಣಿಕರ್, ಪಾಂಡುರಂಗ ಕೇಣಿಕರ, ರಾಜು ಟಿ.ಹರಿಕಂತ್ರ, ಸಂಜೀವ ಬಲೇಗಾರ, ವೆಂಕಟೇಶ ದರ‍್ಗೇಕರ್, ರತ್ನಾಕರ ಹರಿಕಂತ್ರ ಉಪಸ್ಥಿತರಿದ್ದರು. ಶೈಕ್ಷಣಿಕ ಸಮಿತಿಯ ಅಧ್ಯಕ್ಷ ಶಿವಾನಂದ ತಾಂಡೇಲ್, ಪ್ರಧಾನ ಕಾರ್ಯದರ್ಶಿ ಟಿ.ಬಿ. ಹರಿಕಾಂತ ನಿರ್ವಹಿಸಿದರು.
ಇದನ್ನೂ ಓದಿ: ವಂದೇ ಭಾರತ ವಾಣಿಜ್ಯ ಸಂಚಾರ ಪ್ರಾರಂಭ