ನ್ಯೂಪಡ್ಪು ರಸ್ತೆಗೆ ತಾಗಿಕೊಂಡಿರುವ ತ್ವಾಹ ಜುಮಾ ಮಸೀದಿಯ ತಡೆಗೋಡೆ ಬುಧವಾರ ರಾತ್ರಿ ಕುಸಿದಿರುವುದು. 
ಜಿಲ್ಲೆ

ಹರೇಕಳ ನ್ಯೂಪಡ್ಪು ಮಸೀದಿ ತಡೆಗೋಡೆ ಕುಸಿತ

Vinod Kumar

ಉಳ್ಳಾಲ: ಹರೇಕಳ ಗ್ರಾಮದ ಹೃದಯಭಾಗ ನ್ಯೂಪಡ್ಪು ರಸ್ತೆಗೆ ತಾಗಿಕೊಂಡಿರುವ ತ್ವಾಹ ಜುಮಾ ಮಸೀದಿಯ ತಡೆಗೋಡೆ ಬುಧವಾರ ರಾತ್ರಿ ಕುಸಿದು ಬಿದ್ದಿದೆ.

ಭಾರೀ ಮಳೆಗೆ ತಡೆಗೋಡೆ ಶಿಥಿಲ

ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತಡೆಗೋಡೆ ಶಿಥಿಲಗೊಂಡು ಕುಸಿದು ಮುಖ್ಯ ರಸ್ತೆಗೆ ಬಿದ್ದಿದೆ. ತಡೆಗೋಡೆ ಕುಸಿದ ಸಂದರ್ಭ ರಸ್ತೆಯಲ್ಲಿ ಯಾವುದೇ ವಾಹನ, ಜನ ಸಂಚಾರ ಇಲ್ಲದ ಕಾರಣ ಸಂಭಾವ್ಯ ಬಾರಿ ದೊಡ್ಡ ಅನಾಹುತ ತಪ್ಪಿದೆ.

ಸ್ಥಳ ಪರಿಶೀಲಿಸಿ ಅಧಿಕಾರಿಗಳಿಗೆ ಮಾಹಿತಿ

ಸ್ಥಳಕ್ಕೆ ಹರೇಕಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಬ್ದುಲ್ ಮಜೀದ್, ಸದಸ್ಯರಾದ ಬದ್ರುದ್ದೀನ್, ಅಬ್ದುಲ್ ಸತ್ತಾರ್, ಅಬ್ದುಲ್ ಬಶೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಸೀದಿಯ ಆಡಳಿತ ಕಮಿಟಿ ಸ್ಥಳೀಯ ಯುವಕರೊಂದಿಗೆ ಸೇರಿ ರಸ್ತೆಯ ಅಡೆತಡೆ ಸರಿಪಡಿಸಿದ್ದಾರೆ.