ತಾವರಗೇರಾದ ಮೌಲಾನಾ ಆಜಾದ್ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳ ಬೀಕ್ಳೊಡುಗೆ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಪಪಂ ಸದಸ್ಯ ವೀರನಗೌಡ ಪಾಟೀಲ ಚಾಲನೆ ನೀಡಿದರು. ಪ್ರಮುಖರಾದ ಜೀವನಸಾಬ, ಜಗದೀಶಪ್ಪ, ಮರಿಸ್ವಾಮಿ, ಗುರುಪಾದಮ್ಮ, ಶಫಿಮುಲ್ಲಾ, ರಾಘಪ್ಪಶ್ರೀರಾಮ, ಖಾಜಾಪಾಷಾ ಇತರರಿದ್ದರು. 
ಜಿಲ್ಲೆ

ಸಾಧನೆಗೆ ಕಠಿಣ ಶ್ರಮ ಅವಶ್ಯ

ಗಾಯತ್ರಿ ಮಾಲಿಪಾಟೀಲ್

ತಾವರಗೇರಾ: ಗಳಿಸಿದ ಜ್ಞಾನವನ್ನು ಯಾರೂ ಕಸಿದುಕೊಳ್ಳುವುದಿಲ್ಲ. ವಿದ್ಯೆಯಿಂದ ಜೀವನ ಶೈಲಿ ಬದಲಾಗುತ್ತದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ.ಜೀವನಸಾಬ ಬಿನ್ನಾಳ ಹೇಳಿದರು.

ಪಟ್ಟಣದ ಮೌಲಾನಾ ಆಜಾದ್ ಸರ್ಕಾರಿ ಮಾದರಿ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಧನೆಗೆ ಕಠಿಣ ಶ್ರಮ ಅವಶ್ಯ. ಏಕಾಗ್ರತೆಯಿಂದ ಓದಿದರೆ ಗುರಿ ತಲುಪಲು ಸಾಧ್ಯ. ವಿದ್ಯೆ ಜತೆ ಸಂಸ್ಕಾರ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಪಂ ಸದಸ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ವೀರನಗೌಡ ಪಾಟೀಲ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲೇ ಗುರಿ ಹೊಂದಿರಬೇಕು. ಮೊಬೈಲ್ ಗೀಳು ಬಿಟ್ಟು ಅಭ್ಯಾಸದ ಕಡೆಗೆ ಗಮನಕೊಡಿ. ಊರಿಗೆ ಒಳ್ಳೆಯ ಹೆಸರು ತರಬೇಕು ಎಂದರು.

ತಾಲೂಕು ಕ್ಷೇತ್ರ ಸಮನ್ವಯಾಧಿಕಾರಿ ಎಂ. ಜಗದೀಶಪ್ಪ, ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಸೈಯದ್ ಖಾಜಾಪಾಷಾ ಮೌಲಾನ,ಪಪಂ ಸದಸ್ಯರಾದ ಶಫಿಮುಲ್ಲಾ, ಮರಿಯಮ್ಮ ಬಿಸ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷೆ ಗುರುಪಾದಮ್ಮ ಭಂಡಾರಿ, ಕುಷ್ಟಗಿ ತಾಲೂಕು ಶಿಕ್ಷಣ ಸಂಯೋಜಕ ರಾಘಪ್ಪಶ್ರೀರಾಮ, ಪ್ರಾಚಾರ್ಯ ನೀಲಪ್ಪ ಗೋಡಿ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮುಖ್ಯಶಿಕ್ಷಕಿ ಉಮಾ ಇತರರಿದ್ದರು.