ಜಿಲ್ಲೆ

ರೇಷನ್​ ಎತ್ತುವಳಿ ವಿಚಾರದಲ್ಲಿ ಆಹಾರ ಇಲಾಖೆ ಕಿರುಕುಳ

ಬೆಂಗಳೂರು: ರೇಷನ್​ ಎತ್ತುವಳಿ ವಿಚಾರದಲ್ಲಿ ಆಹಾರ ಇಲಾಖೆಯು ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಅನಗತ್ಯವಾಗಿ ಕಿರುಕುಳ ನೀಡುತ್ತಿದೆ ಎಂದು ರಾಜ್ಯ ಸರ್ಕಾರಿ ಪಡಿತರ ವಿತರಕ ಸಂ ಆಕ್ರೋಶ ವ್ಯಕ್ತಪಡಿಸಿದೆ.

ಜನವರಿ ಕೊನೆಯ ವಾರದಲ್ಲಿ ಸಗಟು ಮಳಿಗೆಗಳಿಂದ ಮಾಲೀಕರಿಗೆ ಪೂರ್ತಿ ಪ್ರಮಾಣದಲ್ಲಿ ಹಂಚಿಕೆ ಹಾಕಿ ವಿತರಣೆ ಮಾಡಿ ಎಂದು ಆದೇಶವಿದೆ. ಫೆಬ್ರವರಿ ತಿಂಗಳಲ್ಲಿ ಉಳಿದಿದ್ದ ರಾಗಿಯನ್ನು ಅಂತ್ಯೋದಯ ಕಾರ್ಡ್​ದಾರರಿಗೆ ವಿತರಿಸಲು ಪಡಿತರ ಕೊರತೆಯಾಗಿದೆ. ಹೀಗಿದ್ದರೂ ಕ್ಲೋಸರ್​ ಕೊಡದೆ ವಿನಾ ಕಾರಣ ಮಾಲೀಕರಿಗೆ ಇಲಾಖೆಯ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ. ಆಯಾ ತಿಂಗಳಿನಲ್ಲಿ ಕ್ಲೋಸರ್​ ನೀಡುತ್ತಿಲ್ಲ. ಪಡಿತರ ಇಲ್ಲದಿದ್ದರೆ ಫಲಾನುಭವಿಗಳಿಗೆ ಹಂಚಿಕೆ ಮಾಡೋದು ಹೇಗೆ ಎಂದು ಸಂದ ಅಧ್ಯಕ್ಷ ಟಿ.ಕೃಷ್ಣಪ್ಪ ಪ್ರಶ್ನಿಸಿದರು.

ಅವ್ಯವಹಾರ ನಡೆದಿರುವ ಅಂಗಡಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಿ. ಇದರ ಬಗ್ಗೆ ನಮದೇನೂ ಅಭ್ಯಂತರವಿಲ್ಲ. ಪ್ರಸಕ್ತ ತಿಂಗಳು ಮುಗಿಯಲು 10 ದಿನ ಬಾಕಿ ಇದೆ. ಇನ್ನೂ ನಮಗೆ ಕ್ಲೋಸರ್​ ಮಾಡಲು ಅವಕಾಶ ಸಿಕ್ಕಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಹಾರಕೆ ಉತ್ತರ ನೀಡುತ್ತಾರೆ. ಹಲವು ಬಾರಿ ಕಾರ್ಡ್​ದಾರರಿಗೆ ರೇಷನ್​ ವಿತರಿಸಲು ಸರ್ವರ್​ ಸಮಸ್ಯೆಯಾಗುತ್ತಿದೆ. ನಮ್ಮ ಎಲ್ಲ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸದಿದ್ದರೆ ರೇಷನ್​ ಎತ್ತುವಳಿ ನಿಲ್ಲಿಸಿ ಪ್ರತಿಭಟನೆ ನಡೆಸುವುದಾಗಿ ಸರ್ಕಾರಕ್ಕೆ ಸಂಘ ಎಚ್ಚರಿಕೆ ಕೊಟ್ಟಿದೆ.