More

    ಚುನಾವಣಾ ಬಾಂಡ್​ ಕುರಿತು ತನಿಖೆಯಾಗಲಿ:ಹಿರಿಯ ವಕೀಲ ಪ್ರಶಾಂತ್​ ಭೂಷಣ್​ ಒತ್ತಾಯ

    ಬೆಂಗಳೂರು: ಚುನಾವಣಾ ಬಾಂಡ್​ ಕುರಿತು ಸುಪ್ರೀಂಕೋರ್ಟ್​ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಹಿರಿಯ ವಕೀಲ ಪ್ರಶಾಂತ್​ ಭೂಷಣ್​ ಒತ್ತಾಯಿಸಿದ್ದಾರೆ.

    ರಾಜ್ಯ ಎಸ್ಸಿ,ಎಸ್ಟಿ ಗುತ್ತಿಗೆದಾರರ ಸಂಘ ಶನಿವಾರ ಯುವಿಸಿಇ ಅಲ್ಯುಮ್ನಿ ಅಸೋಸಿಯೇಷನ್​ ಸಭಾಂಗಣದಲ್ಲಿ ಆಯೋಜಿಸಿದ್ದ “ಚುನಾವಣಾ ಬಾಂಡ್​ ಮತ್ತು ಮುಂದಿನ ಕ್ರಮಗಳ ಕುರಿತು’ ವಿಚಾರಸಂಕಿರಣದಲ್ಲಿ ಮಾತನಾಡಿದರು.

    ಎಲೆಕ್ಟ್ರೊರಲ್​ ಬಾಂಡ್​ ಅಕ್ರಮದ ಬಗ್ಗೆ ಐಟಿ, ಸಿಬಿಐ, ಇ.ಡಿ. ಸೇರಿ ಸರ್ಕಾರದ ಅಧೀನ ಸಂಸ್ಥೆಗಳ ನೇತೃತ್ವದಲ್ಲಿ ತನಿಖೆ ನಡೆದರೆ ಸತ್ಯ ಹೊರಬರುವುದಿಲ್ಲ. ಬಾಂಡ್​ ಪ್ರಕರಣದಲ್ಲಿ ಭಾಗಿಯಾದ ರಾಜಕೀಯ ಪಕ್ಷಗಳು, ಬಾಂಡ್​ ಪಡೆದಿರುವ ಕಂಪನಿಗಳು, ವ್ಯಕ್ತಿಗಳ ಪಾತ್ರದ ಬಗ್ಗೆ ಕ್ರಿಮಿನಲ್​ ತನಿಖೆಯಾಗಬೇಕು. ಬಾಂಡ್​ ಹಣವನ್ನು ರಾಜಕೀಯ ಪಕ್ಷಗಳಿಂದ ವಶ ಪಡಿಸಿಕೊಳ್ಳಬೇಕು. ಬಾಂಡ್​ ನೀಡಿರುವ ಕಂಪನಿಗಳಿಗೆ ನೆರವಿಗೆ ಸರ್ಕಾರ ತನ್ನ ನೀತಿಗಳಲ್ಲಿ ಬದಲಾವಣೆ ತಂದಿದೆ. ಹಲವು ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ ಎಂದು ಪ್ರತಿಪಾದಿಸಿದರು.

    ಗಿಡ,ಮರಕ್ಕೆ ಮಳೆ ನೀರು ಇಂಗುವ ವ್ಯವಸ್ಥೆ ಮಾಡಲಿ : ಸಂಗೀತ ನಿರ್ದೇಶಕ ಗುರುಕಿರಣ್​ ಸಲಹೆ

    ಅಸೋಸಿಯೇಷನ್​ ಫಾರ್​ ಡೆಮಾಕ್ರಟಿಕ್​ ರಿಫಾಮ್ಸ್​ರ್ ಅಧ್ಯಕ್ಷ ಪೊ. ತ್ರಿಲೋಚನ್​ ಶಾಸಿ ಮಾತನಾಡಿ, 40 ಕೋಟಿ ರೂ. ಬಾಂಡ್​ ನೀಡಿ 40 ಸಾವಿರ ಕೋಟಿ ರೂ.ಗಳ ಗುತ್ತಿಗೆ ಪಡೆದವರು ಸರಿಯಾಗಿ ಕಾಮಗಾರಿ ನಿರ್ವಹಿಸುವರೆ? ಒಂದು ವೇಳೆ ಅವರು ಅಕ್ರಮ ಎಸಗಿದರೆ ಅವರ ಮೇಲೆ ಐಟಿ, ಇ.ಡಿ., ಸಿಬಿಐ ತನಿಖೆ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಜನರ ಮಾಹಿತಿ ಹಕ್ಕುಗಳ ರಾಷ್ಟ್ರೀಯ ಅಭಿಯಾನದ ಸಹ ಸಂಚಾಲಕಿ ಅಂಜಲಿ ಭಾರದ್ವಾಜ್​, ಸಂದ ಅಧ್ಯಕ್ಷ ಮಹಾದೇವಸ್ವಾಮಿ, ಹಿರಿಯ ವಕೀಲ ಹರೀಶ್​ ನರಸಪ್ಪ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts