More

    ಗಿಡ,ಮರಕ್ಕೆ ಮಳೆ ನೀರು ಇಂಗುವ ವ್ಯವಸ್ಥೆ ಮಾಡಲಿ : ಸಂಗೀತ ನಿರ್ದೇಶಕ ಗುರುಕಿರಣ್​ ಸಲಹೆ

    ಬೆಂಗಳೂರು: ಅರಣ್ಯ ಇಲಾಖೆ,ಬಿಬಿಎಂಪಿ ಸಹಯೋಗದಲ್ಲಿ ಜಯಕರ್ನಾಟಕ ಜನಪರ ವೇದಿಕೆ, ನಗರದಲ್ಲಿರುವ ಗಿಡ, ಮರಗಳ ಬೇರುಗೆ ಸರಾಗವಾಗಿ ನೀರು ಹರಿಯಲು ಇರುವ ಅಡೆತಡೆ ನಿವಾರಣೆಗೆ ಕೈಗೆತ್ತಿಗೊಂಡಿರುವ “ಫ್ರೀ ದಿ ಟ್ರೀ ಅಭಿಯಾನದಡಿ ಇಂದಿರಾನಗರದ ಹಲವೆಡೆ ರಸ್ತೆ ಬದಿಯ ಮರಗಳಿಗೆ ನೀರು ಹರಿಯಲು ಅಡಚಣೆಯಾಗಿದ್ದ ಕಸ,ಕಡ್ಡಿಗಳನ್ನು ತೆರವುಗೊಳಿಸಲಾಯಿತು.

    ಸಂಗೀತ ನಿರ್ದೇಶಕ ಗುರುಕಿರಣ್​ ಮಾತನಾಡಿ,ಬರಗಾಲದಿಂದಾಗಿ ಗಿಡ-ಮರಗಳು ಕಮರಿ ಹೋಗುತ್ತಿವೆ. ಹಲವು ಕಡೆ ಮರಗಳ ಸುತ್ತಮುತ್ತ ಜಾಗದಲ್ಲಿ ಸಿಮೆಂಟ್​, ಡಾಂಬರ್​ನಿಂದ ಮುಚ್ಚಲಾಗಿದೆ. ಇದರಿಂದಾಗಿ ಮರಗಳ ಬುಡಕ್ಕೆ ಸರಾಗವಾಗಿ ಮಳೆ ನೀರು ಹರಿಯುತ್ತಿಲ್ಲ . ಇದನ್ನು ತಪ್ಪಿಸಲು ಇಂಥ ಅಭಿಯಾನಗಳಿಂದ ಗಿಡ, ಮರಗಳನ್ನು ಉಳಿಸುವ ಮೂಲಕ ನಗರವನ್ನು ಇನ್ನಷ್ಟು ಹಸಿರಾಗಿಸಲು ಎಲ್ಲರೂ ಕೈಜೋಡಿಸಬೇಕು ಎಂದರು.

    ರಾಜ್ಯ ಸರ್ಕಾರದ ಖಜಾನೆ ಖಾಲಿ

    ಕರ್ನಾಟಕ ಕುಸ್ತಿ ಸಂದ ಅಧ್ಯ ಗುಣರಂಜನ್​ ಶೆಟ್ಟಿ ಮಾತನಾಡಿ, ಸಾರ್ವಜನಿಕರ ಸಹಯೋಗದಲ್ಲಿ ಸರ್ಕಾರವು, ಗಿಡ, ಮರಕ್ಕೆ ಮಳೆ ನೀರು ಇಂಗುವ ವ್ಯವಸ್ಥೆ ಮಾಡಬೇಕು. ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯಬಾರದು. ಮುಂದಿನ ಪೀಳಿಗೆಗಾಗಿ ಪರಿಸರ ರಕ್ಷಿಸುವ ಕೆಲಸ ಮಾಡಬೇಕು ಎಂದರು.ವೇದಿಕೆ ಅಧ್ಯಕ್ಷ ಶ್ರೀನಿವಾಸ್​, ಐ-ಕೇರ್​ ಬ್ರಿಗೇಡ್​ ಅಧ್ಯಕ್ಷ ಪ್ರಸಾದ್​ ಶೆಟ್ಟಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts