ಹರಪನಹಳ್ಳಿಯಲ್ಲಿ ಡಿವೈಎಸ್ಪಿ ಹಾಲಮೂರ್ತಿರಾವ್ ಅವರಿಗೆ ಪೊಲೀಸ್ ಉಪವಿಭಾಗದಿಂದ ಬೀಳ್ಕೊಡಲಾಲಾಯಿತು. ಎಸಿ ಟಿ.ವಿ.ಪ್ರಕಾಶ, ಸಿಪಿಐಗಳಾದ ನಾಗರಾಜ ಕಮ್ಮಾರ, ಸುಧೀರ ಕುಮಾರ ಬೆಂಕಿ, ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಇತರರಿದ್ದರು. 
ಜಿಲ್ಲೆ

ಪೊಲೀಸರಿಗೆ ಸಮಯ ಪ್ರಜ್ಞೆ ಮುಖ್ಯ

ಹರಪನಹಳ್ಳಿ: ವೃತ್ತಿ ಜೀವನದಲ್ಲಿ ಪೊಲೀಸರಿಗೆ ಸಮಯ ಪ್ರಜ್ಞೆ ಇರಬೇಕು. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಡಿವೈಎಸ್ಪಿ ವಿ.ಎಸ್.ಹಾಲಮೂರ್ತಿರಾವ್ ಹೇಳಿದರು.

ಪಟ್ಟಣದ ಡಿವೈಎಸ್ಪಿ ಕಚೇರಿಯಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಜನರು ಉಪವಿಭಾಗದ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಬೇಕು. ಹರಪನಹಳ್ಳಿ ಹಾಗೂ ಹೂವಿನಹಡಗಲಿ ತಾಲೂಕುಗಳನ್ನು ಒಳಗೊಂಡ ಪೊಲೀಸ್ ಉಪವಿಭಾಗದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಜನರು ಹೆಚ್ಚಿನ ಸಹಕಾರ ನೀಡುತ್ತಾರೆ ಎಂದರು.

ಸಿಪಿಐ ನಾಗರಾಜ ಎಂ.ಕಮ್ಮಾರ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಸಂಗಪ್ಪನವರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ರೇಣುಕಾದೇವಿ ಮಾತನಾಡಿದರು.

ಎಸಿ ಟಿ.ವಿ.ಪ್ರಕಾಶ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ಹೂವಿನಹಡಗಲಿ ಸಿಪಿಐ ಸುಧೀರ ಕುಮಾರ ಬೆಂಕಿ, ಪಿಎಸ್‌ಐ ಶಿವಕುಮಾರನಾಯ್ಕ, ಎಎಸ್‌ಐ ನಿಂಗಪ್ಪ, ಸಿಬ್ಬಂದಿ ಶಂಭುನಾಥ, ಅಣ್ಣಿ ಜಾತಪ್ಪ, ಪ್ರಭಾರ ತಹಸೀಲ್ದಾರ್ ಕಾರ್ತಿಕ್, ಮುಖಂಡರಾದ ಹುಲಿಕಟ್ಟಿ ಚಂದ್ರಪ್ಪ, ಲೋಕೇಶ, ಪುರಸಭಾ ಸದಸ್ಯ ಜಾಕೀರ ಹುಸೇನ್, ಕರಿಬಸಪ್ಪ, ಪಿಎಸ್‌ಐಗಳಾದ ಶಂಭುಲಿಂಗ ಹಿರೇಮಠ, ನಾಗರತ್ನಾ, ಕಿರಣ್ ಕುಮಾರ, ನಾಗರಾಜ ಇತರರಿದ್ದರು.