ಜಿಲ್ಲೆ

ಸಮೃದ್ಧ ಮಳೆಗಾಗಿ ಮಕ್ಕಳಿಂದ ಗುರ್ಜಿ ಪೂಜೆ

ಹನುಮಸಾಗರ: ಸಮೀಪದ ಬಾದಿಮನಾಳ ಗ್ರಾಮದ ಮಕ್ಕಳು ಸಮೃದ್ಧ ಮಳೆಗಾಗಿ ಪ್ರಾರ್ಥಿಸಿ ಮಂಗಳವಾರ ಗುರ್ಜಿ ಪೂಜೆ ಮಾಡಿದರು.

ಗುರ್ಜಿ ತಲೆ ಮೇಲೆ ಹೊತ್ತು ತುಮರಿಕೊಪ್ಪ, ಬಾದಿಮನಾಳದ ಮನೆ ಮನೆಗೆ ತೆರಳಿ ಗುರ್ಜಿ ಗುರ್ಜಿ ಎಲ್ಲಾಡಿ ಬಂದೆ, ಹಳ್ಳ ಕೊಳ್ಳ ಸುತ್ತಾಡಿ ಬಂದೆ, ಕಾರ ಮಳೆಯೆ, ಕಪ್ಪತ ಮಳೆಯೆ, ಸುರಿ ಸುರಿಯೇ ಮಳೆರಾಯ, ಬಣ್ಣ ಕೊಡತಿನಿ ಬಾ ಮಳೆಯೆ, ಸುಣ್ಣ ಕೊಡತಿನಿ ಸುರಿ ಮಳೆಯೇ ಎಂದು ಹಾಡುತ್ತಾ ಮೈಮೇಲೆ ನೀರು ಹಾಕಿಸಿಕೊಂಡರು.

ಪ್ರತಿ ಮನೆಯಲ್ಲೂ ದವಸ ಧಾನ್ಯ ಪಡೆದರು. ಗ್ರಾಮದ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಹೀಗೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಸಾರ್ವಜನಿಕರಲ್ಲಿದೆ.