ಕೋಟ: ಪರಿಸರ ಜಾಗೃತಿ ಪ್ರತಿಯೊಬ್ಬರಲ್ಲೂ ಮೂಡಬೇಕು ಆಗ ಮಾತ್ರ ಸಮೃದ್ಧ ಪರಿಸರ ಕಟ್ಟಲು ಸಾಧ್ಯ ಎಂದು ಉದ್ಯಮಿ ಮಧುಸೂದನ್ ಹೇರೂರು ಹೇಳಿದರು.
ಕೋಟ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಸಮುದ್ಯತಾ ಗ್ರೂಪ್ಸ್ ಕೋಟ ಸಹಯೋಗದೊಂದಿಗೆ ಪ್ರತಿವರ್ಷ ಜೂನ್‌ನಿಂದ ಅಗಸ್ಟ್‌ವರೆಗೆ ನಡೆಯುವ ಪರಿಸರಸ್ನೇಹಿ ಹಸಿರು ಅಭಿಯಾನಕ್ಕೆ ಸುವರ್ಣ ಎಂಟರ್ಪ್ರೈಸ್ ಬ್ರಹ್ಮಾವರ, ಗೀತಾನಂದ ಫೌಂಡೇಶನ್ ಮಣೂರು ಉಚಿತ ಗಿಡ ವಿತರಿಸುತ್ತಿದ್ದು, ಇದರ ಭಾಗವಾಗಿ ಮಧುಸೂದನ್ ಹೇರೂರು ಒಂದು ಸಾವಿರ ಅಧಿಕ ಪಂಚವರ್ಣ ಸಂಸ್ಥೆಗೆ ನೀಡಲಿದ್ದು, ಸಾಂಕೇತಿಕವಾಗಿ 150 ಗಿಡಗಳನ್ನು ಮಂಗಳವಾರ ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಅವರಿಗೆ ಹಸ್ತಾಂತರಿಸಿ ಮಾತನಾಡಿದರು. ಪಂಚವರ್ಣ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಸುಧೀಂದ್ರ ಜೋಗಿ, ಸದಸ್ಯರಾದ ಕಾರ್ತಿಕ್ ಎನ್., ಮಹೇಶ್ ಬೆಳಗಾವಿ, ಸುಧೀರ್ ಪೂಜಾರಿ ಇದ್ದರು.