ಹೆಬ್ರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 1984-85ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಭಾನುವಾರ ತಮ್ಮ ಗುರುಗಳನ್ನು ಗೌರವಿಸಿದರು. 
ಜಿಲ್ಲೆ

ಕೊಠಡಿ ಹಸ್ತಾಂತರ, ಗುರುವಂದನೆ

ಇಂದಿರಾ ಎನ್ ಕೆ

ಹೆಬ್ರಿ: ಹೆಬ್ರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 1984-85ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಸುಮಾರು 5 ಲಕ್ಷ ರೂ.ವೆಚ್ಚದಲ್ಲಿ ನವೀಕರಿಸಿದ ತಂತ್ರಜ್ಞಾನ ಆಧಾರಿತ ತರಗತಿ ಕೊಠಡಿ ಹಸ್ತಾಂತರ ಮತ್ತು ಗುರುವಂದನೆ ಕಾರ್ಯಕ್ರಮ ಭಾನುವಾರ ನಡೆಯಿತು.

ಹೆಬ್ರಿ ರಘುರಾಮ ಸೋಮಯಾಜಿ, ಶಿವಪುರ ರಾಮಕೃಷ್ಣ ಭಟ್, ಕಡ್ತಲ ಕರುಣಾಕರ ಹೆಗ್ಡೆ, ಮುರಳೀಧರ ಹಾಲಂಬಿ, ಆತ್ರಾಡಿ ಶಂಕರ ಮರಾಠೆ, ರಾಮ ಸ್ವಾಮಿ, ಮುತ್ತಯ್ಯ ಶೆಟ್ಟಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಹೆಬ್ರಿ ನಾಗರಾಜ ಜೋಯಿಸ್ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ನಡೆಯಿತು. ಅಗಲಿದ ವಿದ್ಯಾರ್ಥಿಗಳು ಮತ್ತು ಗುರುಗಳನ್ನು ಡಾ.ಸುನೀತಾ ಶೆಟ್ಟಿ ಸ್ಮರಿಸಿದರು. ಸತೀಶ ಶೆಟ್ಟಿ, ಪೂರ್ಣಾಕರ್, ಶೋಧನ್ ಹೆಗ್ಡೆ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೀತಾನದಿ ವಿಜೇಂದ್ರ ಶೆಟ್ಟಿ, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಶಿಕ್ಷಕರು ಉಪಸ್ಥಿತರಿದ್ದರು. ರೂಪಾರೇಖ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶ್ರೀಮುದ್ರಾಡಿ ನಿರೂಪಿಸಿದರು. ಡಾ.ರಮೇಶ ಶೆಟ್ಟಿ ವಂದಿಸಿದರು.