ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಂಡಾಜೆ ವಲಯದ ಕಲ್ಮಂಜ ಒಕ್ಕೂಟದ ಧಾರಿಣಿ ತಂಡದ ಸದಸ್ಯೆ ಹೇಮಾವತಿ ಅವರ ಪುತ್ರ ದುರ್ಗಾಪ್ರಸಾದ್ ಬೈಕ್ ಅಪಘಾತದಿಂದ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಒಟ್ಟು 4.5 ಲಕ್ಷದ ವರೆಗೆ ಚಿಕಿತ್ಸಾ ವೆಚ್ಚ ಖರ್ಚಾಗಿದ್ದು, ಮುಂದಿನ ಚಿಕಿತ್ಸೆಗಾಗಿ ಯೋಜನೆಯಿಂದ ಮಂಜೂರಾದ 25000 ರೂ. ಮೊತ್ತದ ಸಹಾಯಧನದ ಚೆಕ್‌ನ್ನು ಫಲಾನುಭವಿಗೆ ಹಸ್ತಾಂತರಿಸಲಾಯಿತು.
ಗ್ರಾಪಂ ಸದಸ್ಯ ಶ್ರೀಧರ ಮಡಿವಾಳ ಗಾಯಾಳುವಿನ ತಾಯಿ ಹೇಮಾವತಿ ಅವರಿಗೆ ಚೆಕ್ ಹಸ್ತಾಂತರಿಸಿದರು. ಜನಜಾಗೃತಿ ವೇದಿಕೆ ಸದಸ್ಯ ವಸಂತ ಮಡಿವಾಳ, ಒಕ್ಕೂಟದ ಅಧ್ಯಕ್ಷ ಬಿ.ಎನ್. ಹಮೀದ್, ಮುಂಡಾಜೆ ವಲಯದ ಮೇಲ್ವಿಚಾರಕ ಜನಾರ್ದನ ಮಾಚಾರು, ಕಲ್ಮಂಜ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಜಿಶಾ, ಶೌರ್ಯ ವಿಪತ್ತು ತಂಡದ ಸುಧೀರ್ ಮೊದಲಾದವರಿದ್ದರು.