ಜಿಲ್ಲೆ

ಹಳಗನ್ನಡ ಪಠ್ಯ ಓದು ಕಾರ್ಯಾಗಾರ

Avinash R

ಬೆಳ್ತಂಗಡಿ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಕನ್ನಡ ವಿಭಾಗದ ಸಹಯೋಗದೊಂದಿಗೆ, ಹಳಗನ್ನಡ ಪಠ್ಯಗಳ ಓದು ಮತ್ತು ಅರ್ಥೈಸುವಿಕೆ ಎಂಬ ವಿಷಯ ಕುರಿತು ಐದು ದಿನಗಳ ತರಬೇತಿ ಕಾರ್ಯಾಗಾರ ಜ.6ರಿಂದ 10ರವರೆಗೆ ಉಜಿರೆಯ ಶ್ರೀ ಧ.ಮಂ.ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆಯಲಿದೆ.

ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಕಾರ್ಯಾಗಾರ ನಡೆಸಲಿದೆ. ಪ್ರೊ. ಬಸವರಾಜ ಕಲ್ಗುಡಿ ಉದ್ಘಾಟಿಸಲಿದ್ದಾರೆ. ವಿದ್ವಾಂಸರಾದ ಪ್ರೊ.ಪಾದೆಕಲ್ಲು ವಿಷ್ಣು ಭಟ್ಟ, ಡಾ.ಪುಂಡಿಕಾ ಗಣಪಯ್ಯ ಭಟ್, ಪ್ರೊ.ಗುರುಪಾದ ಮರಿಗುದ್ದಿ, ಪ್ರೊ.ಶಿವಕುಮಾರಸ್ವಾಮಿ, ಪ್ರೊ.ಮಧೂರು ಮೋಹನ ಕಲ್ಲೂರಾಯ, ಡಾ.ತಿಮ್ಮಯ್ಯ, ಡಾ.ಯತೀಶ್ವರ ಸಿ. ಚ, ಡಾ.ದಿವಾಕರ ಕೆ, ಡಾ.ಮಾಲಿನಿ ಎನ್.ಅಭ್ಯಂಕರ್, ಡಾ.ಗವಿಸಿದ್ದಯ್ಯ, ಉಜಿರೆ ಅಶೋಕ ಭಟ್, ಮೇಧಾ ಕೆ.ಭಟ್, ಸುಪ್ರೀತಾ ಧರ್ಮಸ್ಥಳ, ಶ್ರೀವಿದ್ಯಾ ಐತಾಳ್ ಸಂಪನ್ಮೂಲ ವಿದ್ವಾಂಸರಾಗಿ ಭಾಗವಹಿಸಲಿದ್ದಾರೆ ಎಂದು ಪ್ರಾಂಶುಪಾಲ ಡಾ.ಬಿ.ಎಂ.ಕುಮಾರ ಹೆಗ್ಡೆ ಮತ್ತು ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಎನ್.ಎಂ.ತಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾಗವಹಿಸಲು ಆಸಕ್ತಿಯಿರುವವರು ಕಾರ್ಯಕ್ರಮ ಸಂಯೋಜಕರಾದ ಡಾ.ಬೋಜಮ್ಮ ಕೆ.ಎನ್.(7204245666) ಹಾಗೂ ಡಾ. ನಾಗಣ್ಣ ಡಿ.ಎ.(9980240210) ಅವರನ್ನು ಸಂಪರ್ಕಿಸಬಹುದಾಗಿದೆ.