ಮಾಲವಿ ಗ್ರಾಪಂಗೆ ನೂತನ ಅಧ್ಯಕ್ಷೆ, ಉಪಾಧ್ಯಕ್ಷರಾಗಿ ಆಯ್ಕೆಯಾದ ಕೊಟ್ರಮ್ಮ, ಮಂಜುನಾಥ ಅವರನ್ನು ಸನ್ಮಾನಿಸಲಾಯಿತು. ಸದಸ್ಯರಾದ ಉಪ್ಪಾರ ರಂಜಿತಾ, ಜತ್ತಿ ಗಂಗಮ್ಮ, ಕಬ್ಬಳ್ಳಿ ಪುಟ್ಟಮ್ಮ, ಮಡಿವಾಳರ ರೇಣುಕಮ್ಮ, ಬಿ.ಜ್ಯೋತಿ, ಹಸನ್ ಸಾಬ್ ಇತರರಿದ್ದರು. 
ಜಿಲ್ಲೆ

ಮಾಲವಿ ಗ್ರಾಮ ಪಂಚಾಯಿತಿಗೆ ಕೊಟ್ರಮ್ಮ ಅಧ್ಯಕ್ಷೆ

ಹಗರಿಬೊಮ್ಮನಹಳ್ಳಿ: ತಾಲೂಕಿನ ಮಾಲವಿ ಗ್ರಾಪಂ ಎರಡನೇ ಅವಧಿಗೆ ನೂತನ ಅಧ್ಯಕ್ಷೆ-ಉಪಾಧ್ಯಕ್ಷರಾಗಿ ಕೊಟ್ರಮ್ಮ, ಮಂಜುನಾಥ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಚಂದ್ರಶೇಖರ್ ಶಂಬಣ್ಣ ಗಾಳಿ ತಿಳಿಸಿದ್ದಾರೆ.

ಒಟ್ಟು 21 ಸದಸ್ಯ ಬಲ ಹೊಂದಿರುವ ಗ್ರಾಪಂನಲ್ಲಿ ಎಸ್ಸಿ ಮೀಸಲು ಸ್ಥಾನಕ್ಕೆ ಕೊಟ್ರಮ್ಮ, ಜ್ಯೋತಿ ಬಾಯಿ ನಾಮಪತ್ರ ಸಲ್ಲಿಸಿದ್ದರು. ಕೊಟ್ರಮ್ಮ 17 ಮತ ಪಡೆದು ಅಧ್ಯಕ್ಷೆಯಾದರು.

ಸಾಮಾನ್ಯ ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಮಂಜುನಾಥ ಮತ್ತು ಎಸ್.ಉಮಾಪತಿ ಸ್ಪರ್ಧಿಸಿದ್ದರು. 16 ಮತ ಗಳಿಸಿದ ಮಂಜುನಾಥ ಆಯ್ಕೆಯಾದರು.

ಗ್ರಾಪಂ ಸದಸ್ಯರಾದ ಉಪ್ಪಾರ ರಂಜಿತಾ, ಜತ್ತಿ ಗಂಗಮ್ಮ, ಕಬ್ಬಳ್ಳಿ ಪುಟ್ಟಮ್ಮ, ಮಡಿವಾಳರ ರೇಣುಕಮ್ಮ, ಬಿ.ಜ್ಯೋತಿ, ಕೊಟಗಿ ನಾಗರಾಜ, ಹಸನ್ ಸಾಬ್, ಎ.ಶಿವಕುಮಾರ್, ಛಲವಾದಿ ಗಿರೀಶ್, ಡಿ.ಪರಶುರಾಮ, ಸೋಗಿ ಭೀಮಪ್ಪ, ಮೇಟ್ರಿ ರೇಣುಕಮ್ಮ, ಶಾಂತಲಾ ಬಾಯಿ, ದೂಗಿ ಬಾಯಿ, ರಾಮಾನಾಯ್ಕ, ಶೇಖರ್‌ನಾಯ್ಕ, ತಳವಾರ ಫಕ್ಕಿರಮ್ಮ, ಪಿಡಿಒ ಎನ್.ಶ್ರೀಕಾಂತ್, ಪಿಎಸ್‌ಐ ಸರಳಾ, ಮುಖಂಡರಾದ ಎಂ.ಕರಿಯಪ್ಪ, ಉಮಾಶಂಕರ್, ಹಂಚಿನಮನಿ ರಮೇಶ್, ಹ್ಯಾಳ್ಯಾದ ಚನ್ನಬಸಪ್ಪ, ಕಟಿಗಿ ಚಂದ್ರಪ್ಪ, ಛಲವಾದಿ ಹುಲುಗಪ್ಪ, ಬಾರಿಕರ ಹುಲುಗಪ್ಪ, ಕೆ.ಎಂ.ಆನಂದ, ರಫೀಕ್ ಸಾಬ್ ಇದ್ದರು.