ಹಗರಿಬೊಮ್ಮನಹಳ್ಳಿ ತಾಲೂಕಿನ ದಶಮಾಪುರ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದ ಎಸ್.ಮರಿಸ್ವಾಮಿ, ಸುಮತಿ ಓಬಳೇಶ್ ಅವರನ್ನು ಸನ್ಮಾನಿಸಲಾಯಿತು.  
ಜಿಲ್ಲೆ

ದಶಮಾಪುರ ಗ್ರಾಪಂಗೆ ಎಸ್.ಮರಿಸ್ವಾಮಿ, ಸುಮತಿ ಓಬಳೇಶ್ ಅವಿರೋಧವಾಗಿ ಆಯ್ಕೆ

ಶಶಿಧರ ಎಲ್

ಹಗರಿಬೊಮ್ಮನಹಳ್ಳಿ: ತಾಲೂಕಿನ ದಶಮಾಪುರ ಗ್ರಾಪಂಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರಾಗಿ ಎಸ್.ಮರಿಸ್ವಾಮಿ ಮತ್ತು ಸುಮತಿ ಓಬಳೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾದ ತಹಸೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿ ತಿಳಿಸಿದ್ದಾರೆ.

ಒಟ್ಟು 17 ಸದಸ್ಯ ಬಲ ಹೊಂದಿರುವ ದಶಮಾಪುರ ಗ್ರಾಪಂಯಲ್ಲಿ ಅಧ್ಯಕ್ಷ ಸ್ಥಾನ ಎಸ್ಸಿಗೆ ಮೀಸಲಾಗಿದ್ದರಿಂದ ಎಸ್.ಮರಿಸ್ವಾಮಿ ಹಾಗೂ ಎಸ್ಟಿಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಸುಮತಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಘೋಷಿಸಲಾಯಿತು. 14 ಸದಸ್ಯರು ಹಾಜರಿದ್ದರು.

ಗ್ರಾಪಂ ಮಾಜಿ ಅಧ್ಯಕ್ಷೆ ಎಚ್.ಎಸ್.ರೋಹಿಣಿ, ಮಾಜಿ ಉಪಾಧ್ಯಕ್ಷ ಸಚ್ಚಿದಾನಂದ, ಸದಸ್ಯರಾದ ಕೋಗಳಿ ಮುದಿಬಸಪ್ಪ, ಅಂಗಡಿ ವೀರಮ್ಮ, ಎಂ.ವೀರೇಶ್, ಪಾಪಮ್ಮ, ದುರುಗವ್ವ, ಕೆ.ಮರಿಯಪ್ಪ, ಜಂಬಣ್ಣ ಸೂಗೂರು, ಕಣಿವಿಹಳ್ಳಿ ನಾಗಮ್ಮ, ಎಂ.ಗಂಗಮ್ಮಮ ಬಳ್ಳಾರಿ ನಾಗರಾಜ, ಪಿಡಿಒ ಪರಸಪ್ಪ ಇದ್ದರು.