ಜಿಲ್ಲೆ

12ರಂದು ಗ್ಯದ್ದಿ ಬೈಲಾಂಗ್ ಕೆಸ್ರಾಟ

ಇಂದಿರಾ ಎನ್ ಕೆ

ಆರ್ಡಿ: ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಅಂಗವಾಗಿ ಅರಸಮ್ಮಕಾನು ನವಶಕ್ತಿ ಯುವಕ ಮಂಡಲ, ಲಯನ್ಸ್ ಕ್ಲಬ್ ಆಶ್ರಯದಲ್ಲಿ ಅರಸಮ್ಮಕಾನು ಶಾಂತನಮಕ್ಕಿ ಗದ್ದೆಯಲ್ಲಿ ಆಗಸ್ಟ್ 12ರಂದು ಅಸಾಡಿಯಂಗ್ ಒಂದ್ ದಿನ ಗ್ಯದ್ದಿ ಬೈಲಾಂಗ್ ಕೆಸ್ರಾಟ ಕಾರ್ಯಕ್ರಮ ನಡೆಯಲಿದೆ. ಯುವಕ ಮಂಡಲ ಅಧ್ಯಕ್ಷ ಕೀರ್ತಿಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಮಡಾಮಕ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಶೇಡಿಮನೆ ಉದ್ಘಾಟಿಸಲಿದ್ದಾರೆ. ಸದಸ್ಯ ಸದಾನಂದ ಪೂಜಾರಿ, ಆರ್ಡಿ, ಬೆಳ್ವೆ, ಗೋಳಿಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ, ಕಾರ್ಯದರ್ಶಿ ಅಣ್ಣಯ್ಯ ಶೆಟ್ಟಿ, ನವಶಕ್ತಿ ಯುವಕ ಮಂಡಲ ಕಾರ್ಯದರ್ಶಿ ಪ್ರಶಾಂತ ಹೆಗ್ಡೆ ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ.