ಜಿಲ್ಲೆ

ಕನ್ಯಾಡಿ ಶ್ರೀಗಳಿಗೆ ಗುರುವಂದನೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನ ಜಗದ್ಗುರು ಪೀಠಾಧೀಶ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ ಅವರಿಗೆ ಬಹರೇನ್ ಬಿಲ್ಲವಾಸ್, ಬಹರೇನ್ ಕನ್ನಡ ಸಂಘ ವತಿಯಿಂದ ಬಹರೇನ್ ಕನ್ನಡ ಸಂಘ ಸಭಾಂಗಣದಲ್ಲಿ ಸರ್ವ ಸಮಾಜ ಸಹಭಾಗಿತ್ವದಲ್ಲಿ ಗುರುವಂದನೆ ನಡೆಯಿತು.

ಫಾಧರ್ ಸಾಜಿ ತೋಮಸ್ ರೆಕ್ಸರ್ ದ ಕಥೇಡ್ರಾಲ್ ಆಫ್ ಅವರ್ ಲೇಡಿ ಆಫ್ ಅರೇಬಿಯಾ, ಕಿಂಗ್ ಡಂ ಆಫ್ ಬಹರೇನ್ ಯುನೇಕೊ ಗ್ರೂಪ್ ಆಫ್ ಕಂಪನೀಸ್ ಸಿಇಒ ಜಯಶಂಕರ್ ವಿಶ್ವನಾಥನ್, ಮುಸ್ಲಿಂ ವೆಲ್‌ೇರ್ ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ರಜಾಕ್, ಕನ್ನಡ ಸಂಘ ಶಾರ್ಜ ಅಧ್ಯಕ್ಷ ಸತೀಶ್ ಪೂಜಾರಿ, ಬಿಲ್ಲವ ಮಹಾಮಂಡಲ ಮಹಿಳಾ ವಿಭಾಗ ಅಧ್ಯಕ್ಷೆ ಗೀತಾಂಜಲಿ ಸುವರ್ಣ, ಬಹರೈನ್ ಕನ್ನಡ ಸಂಘ ಅಧ್ಯಕ್ಷ ಅಜಿತ್ ಬಂಗೇರ, ಮಾಜಿ ಅಧ್ಯಕ್ಷ ಅಮರನಾಥ್ ರೈ, ಬಿಲ್ಲವರ ಫ್ಯಾಮಿಲಿ, ದುಬೈ ಅಧ್ಯಕ್ಷ ದೀಪಕ್ ಎಸ್.ಪಿ., ಶ್ರೀ ಸೌದಿ ಅರೇಬಿಯಾ ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷ ಭಾಸ್ಕರ ಕೋಟ್ಯಾನ್, ಕತಾರ್ ಬಿಲ್ಲವಾಸ್ ಅಧ್ಯಕ್ಷೆ ಅಪರ್ಣಾ ಸುವರ್ಣ, ದಮಾಮ್ ಬಿಲ್ಲವಾಸ್ ಅಧ್ಯಕ್ಷ ಸತೀಶ್ ಕುಮಾರ್ ಬಜಾಲ್, ಕುವೈತ್ ಬಿಲ್ಲವಾಸ್ ಅಧ್ಯಕ್ಷ ಅಮರನಾಥ್ ಸುವರ್ಣ, ಓಮಾನ್ ಬಿಲ್ಲವಾಸ್ ಸ್ಥಾಪಕ ಅಧ್ಯಕ್ಷ ಉಮೇಶ್ ಬಂಟ್ವಾಳ, ರಾಜಕುಮಾರ್, ಬಹರೇನ್ ಬಿಲ್ಲವಾಸ್ ಮಾಜಿ ಅಧ್ಯಕ್ಷ ರಾಜ್‌ಕುಮಾರ್, ಓಮನ್ ಬಿಲ್ಲವಾಸ್ ಮಾಜಿ ಅಧ್ಯಕ್ಷ ಸುಜಿತ್ ಅಂಚನ್, ಬಹರೇನ್ ಬಂಟ್ಸ್ ಸಂಘ ಅಧ್ಯಕ್ಷ ಡಾ.ಮಿಥುನ್ ಭಂಡಾರಿ, ಬಹರೇನ್ ನಾರಾಯಣ ಕಲ್ಪರ್ ಸೊಸೈಟಿ ಅಧ್ಯಕ್ಷ ಕೃಷ್ಣಕುಮಾರ್, ಬಹರೈನ್ ಮೊಗವೀರ ಸಂಘ ಅಧ್ಯಕ್ಷೆ ಶಿಲ್ಪಾ ಶಾಮಿತ್ ಕುಂದರ್, ಬಹರೇನ್ ಕುಲಾಲ್ ಸಂಘ ಅಧ್ಯಕ್ಷ ಗಣೇಶ್ ಮಾಣಿಲ, ಬಹರೇನ್ ವಿಶ್ವಕರ್ಮ ಸೇವಾ ಬಳಗ ಅಧ್ಯಕ್ಷ ಸತೀಶ್ ಆಚಾರ್ಯ, ಬಹರೇನ್ ಸಮಿತಿ ಅಧ್ಯಕ್ಷೆ ಹೇಮಾ ಎಸ್.ಪಾಟೇಲ್, ಬಹರೇನ್ ಬಿಲ್ಲವಾಸ್ ಅಧ್ಯಕ್ಷ ಪ್ರಕಾಶ್ ಅಂಚನ್, ಬಹರೇನ್ ಬಿಲ್ಲವಾಸ್ ಮಾಜಿ ಅಧ್ಯಕ್ಷ ಹರೀಶ್ ಪೂಜಾರಿ ಭಾಗವಹಿಸಿದ್ದರು. ಗುರುದೇವ ಮಠದಿಂದ ಟ್ರಸ್ಟಿ ತುಕಾರಾಮ ಸಾಲ್ಯಾನ್, ಕೃಷ್ಣಪ್ಪ ಗುಡಿಗಾರ್, ರವೀಂದ್ರ ಪೂಜಾರಿ ಆರ್ಲ, ರಾವೇಂದ್ರ ವಿ.ನಾಯ್ಕ ಭಾಗವಹಿಸಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ

ವಿಭಿನ್ನ ತಂಡಗಳಿಂದ ಭಜನೆ, ಕುಣಿತ ಭಜನೆ, ಸತ್ಯನಾರಾಯಣ ಪೂಜೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಪೂಜೆ, ಶ್ರೀಗಳಿಂದ ಆಶೀರ್ವಚನ, ಮಂತ್ರಾಕ್ಷತೆ ವಿತರಣೆೆ, ಅನ್ನಪ್ರಸಾದ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.