ತಾವರಗೇರಾದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಇರಮುಡಿ ಕಟ್ಟಿಸಿಕೊಂಡು ಶಬರಿಮಲೆಕಡೆ ಪ್ರಯಾಣ ಬೆಳಸಿದರು. 
ಜಿಲ್ಲೆ

ಗುರುಸ್ವಾಮಿಗಳಿಂದ ಬಾಲಸ್ವಾಮಿಗಳಿಗೆ ಇರಮುಡಿ

Kopala - Desk - Eraveni

ತಾವರಗೇರಾ: ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಸಮಾರು 265 ಜನ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಸೋಮವಾರ ಗುರುಸ್ವಾಮಿಗಳಾದ ಪ್ರಶಾಂತ, ಯಂಕನಗೌಡ, ಮೌನೇಶ, ಅಶೋಕ, ಸಿದ್ದಣ್ಣ , ಚಿದಾನಂದ, ವೆಂಕಟಸಿಂಗ, ಅಮರೇಶ ಇರಮುಡಿ ಕಟ್ಟಿದರು.

ಅದರಲ್ಲಿ 12 ರಿಂದ 15 ಜನ ಮಕ್ಕಳು ಮಣಿಕಂಠಗಳಾಗಿದ್ದರು. ಬೆಳಗ್ಗೆ 7ರಿಂದ ಸಾಯಂಕಾಲ 5ಗಂಟೆವರಿಗೆ ಕಾರ್ಯಕ್ರಮ ನಡೆಯಿತು. ಮಾಲಾಧಾರಿಗಳು ಗುಂಪುಗಳಾಗಿ ವಿಂಗಡನೆಗೊಂಡು ವಾಹನಗಳಲ್ಲಿ ಏಕ ಕಾಲದಲ್ಲಿ ಶಬರಿಮಲೆ ಕಡೆ ಪಯಣ ಬೆಳಸಿದರು. ಕುಟುಂಬಸ್ಥರು ಮತ್ತು ಸ್ನೇಹಿತರು ಬೀಳ್ಕೋಟ್ಟರು.

12 ರಿಂದ 15 ಜನ ಮಕ್ಕಳು ಮಣಿಕಂಠಗಳಾಗಿದ್ದರು