ಜಿಲ್ಲೆ

ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್

ಇಂದಿರಾ ಎನ್ ಕೆ

ಕುಂದಾಪುರ: ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ಬುಧವಾರ ದೀಪಾವಳಿ ಆಚರಣೆ ನಡೆಯಿತು. ಬಾಂಡ್ಯ ಎಜುಕೇಶನ್ ಟ್ರಸ್ಟ್‌ನ ಜಂಟಿ ಮ್ಯಾನೇಜಿಂಗ್ ಟ್ರಸ್ಟಿ ಅನುಪಮಾ ಎಸ್.ಶೆಟ್ಟಿ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕತ್ತಲಿನಿಂದ ಬೆಳಕಿನೆಡೆಗೆ ಸಾಗುತ್ತ, ಅಂಧಕಾರದಿಂದ ಜ್ಞಾನದ ಕಡೆಗೆ ನಮ್ಮ ಜೀವನ ಕ್ರಮವನ್ನು ಹೊತ್ತು ನಡೆಯಬೇಕು. ದೀಪಾವಳಿ ಹಬ್ಬವು ನಮ್ಮ ದೇಶೀಯ ಸಂಸ್ಕೃತಿಯನ್ನು ಅರ್ಥಪೂರ್ಣವಾಗಿ ಬಿಂಬಿಸಿದ ಹಬ್ಬವಾಗಿದೆ. ಸುಸಂಸ್ಕೃತ ಜೀವನ ಕ್ರಮಕ್ಕಾಗಿ ನಾವೆಲ್ಲರೂ ಹಣತೆಯನ್ನು ಹಚ್ಚಿ ನಮ್ಮ ಒಳಗಿನ ಕತ್ತಲನ್ನು ದೂರ ಮಾಡೋಣ ಎಂದರು.

ಗುರುಕುಲ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲೆ ಡಾ.ರೂಪಾ ಶೆಣೈ ಮಾತನಾಡಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿ ಪೃಥ್ವೀಶ್ ಎಸ್. ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.