ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ಗುರುವಿನ ಗುಲಾಮನಾಗುವ ತನಕ ದೊರೆಯದು ಮುಕ್ತಿ. ಪ್ರತಿಯೋರ್ವ ವಿದ್ಯಾರ್ಥಿಯ ಯಶಸ್ಸಿಗೆ ಮೂಲ ಅಧ್ಯಾಪಕರು. ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಗೆ ಕಾರಣೀಕರ್ತರು. ಈ ಬಾರಿಯ ಎಸ್‌ಎಸ್‌ಎಲ್‌ಸಿಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆಯಲು ಶಿಕ್ಷಕರ ಶ್ರಮ, ವಾರ್ಗದರ್ಶನ ಹಾಗೂ ವಿಶೇಷ ತರಗತಿಗಳು ಕಾರಣ ಎಂದು ಪಾಲಕಾರದ ಅಮೃತಕಲಾ ಹೇಳಿದರು.
ನಾಲ್ಕೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಪಾಲಕರಾದ ಅನಂತ ನಾಯಕ್ ಮುದ್ದೂರು ಮತ್ತು ಲಲಿತಾ ನಾಯಕ್ ಅವರಿಂದ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯಶಿಕ್ಷಕ ಕೃಷ್ಣ ನಾಯ್ಕ ಕೆ. ಅಧ್ಯಕ್ಷತೆ ವಹಿಸಿದ್ದರು. ನೇತಾಜಿ ಸೇವಾ ವೇದಿಕೆ ಸ್ಥಾಪಕ ಅಧ್ಯಕ್ಷ ಪ್ರಸಾದ್ ಹೆಗ್ಡೆ ವಾರಾಳಿ, ಅಧ್ಯಕ್ಷ ಸಿಎ ಅವಿನಾಶ್ ರಾವ್, ದಾನಿಗಳಾದ ಕಾಶೀನಾಥ್ ಶೆಣೈ ಕಜ್ಕೆ, ಶಶಿಧರ್ ಶೆಟ್ಟಿಗಾರ್, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಎನ್.ಕರುಣಾಕರ ಶೆಟ್ಟಿ ಕಜ್ಕೆ, ಕೋಟಿ ಹಾಂಡ, ಎಂ.ಕೆ.ನಾಯ್ಕ ಮಿಯಾರು, ರಾವೇಂದ್ರ ಕುಲಾಲ್, ಸಹಪರಿವಾರ ಜಂಗಮೇಶ್ವರ ದೇವಸ್ಥಾನ ಅರ್ಚಕ ಶಶಾಂಕ್ ಭಟ್, ನಾಗೇಂದ್ರ ಆಚಾರ್ ವಾರಾಳಿ, ನಾಲ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಕೆ.ಪೂಜಾರಿ, ಸದಸ್ಯೆ ಜಯಲಕ್ಷ್ಮೀ ಶೆಟ್ಟಿ, ವಾಜಿ ಅಧ್ಯಕ್ಷೆ ಕಮಲಾ ಬಾಯಿ, ಪಾಲಕರು, ಎಸ್‌ಡಿಎಂಸಿ ಸದಸ್ಯರು, ಹಳೇ ವಿದ್ಯಾರ್ಥಿ ಸಂದ ಪದಾಧಿಕಾರಿಗಳು, ಶಿಕ್ಷಕರು ಇತರರು ಇದ್ದರು.