ಜಿಲ್ಲೆ

ಪುತ್ತಿಗೆ ಗುರು ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ

ಮೂಡುಬಿದಿರೆ: ಪುತ್ತಿಗೆ ಶ್ರೀ ಸೋಮನಾಥೇಶ್ವರ ಮಂದಿರದ ಬಳಿಯ ಗುರು ರಾಘವೇಂದ್ರ ಸ್ವಾಮಿ ಮಂದಿರದಲ್ಲಿ ಶ್ರೀ ರಾಘವೇಂದ್ರ ಸ್ವಾಮೀಯ 254ನೇ ಆರಾಧನಾ ಮಹೋತ್ಸವ ಸೋಮವಾರ ನಡೆಯಿತು.

ಬೆಳಗ್ಗೆ ಪವಮಾನ ಹೋಮ, ಕಲಶಾಭಿಷೇಕ, ಅರ್ಧ ಏಕಾಹ ಭಜನೆ, ಮಧ್ಯಾಹ್ನ ಮಹಾಪೂಜೆ, ಮಹಾರಂಗಪೂಜೆ ನಡೆಯಿತು. 12 ಗಂಟೆಗಳ ಕಾಲ ನಡೆದ ಭಜನಾ ಸಂಕೀರ್ತನೆಯಲ್ಲಿ ಶ್ರೀ ಸೋಮನಾಥೇಶ್ವರ ಭಜನಾ ಮಂಡಳಿ ನೆಲ್ಲಿಗುಡ್ಡೆಪುತ್ತಿಗೆ ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿ ನೆಲ್ಲಿಗುಡ್ಡೆ ಪುತ್ತಿಗೆ, ಶ್ರೀ ನಾರಾಯಣ ಭಜನಾ ಮಂಡಳಿ ನಿಡ್ಡೋಡಿ, ಶ್ರೀ ಕೃಷ್ಣ ಭಜನಾ ಮಂಡಳಿ ಮಾರೂರು ಹೊಸಂಗಡಿ, ಶ್ರೀ ಆದಿಶಕ್ತಿ ಭಜನಾ ಮಂಡಳಿ ಮೂಡುಬಿದಿರೆ, ಶ್ರೀ ನಾರಾಯಣ ಮಹಿಳಾ ಭಜನಾ ತಂಡ ಮೂಡುಬಿದಿರೆ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕೇಪ್ಲಾಜೆ, ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಮೂಡುಬಿದಿರೆ, ಶ್ರೀ ವಿಠೋಬ ರುಕುಮಾಯಿ ಭಜನಾ ಮಂಡಳಿ ಪುತ್ತಿಗೆಪದವು, ಶ್ರೀ ಆದಿಶಕ್ತಿ ಭಜನಾ ಮಂಡಳಿ ಪುತ್ತಿಗೆಪದವು, ಶ್ರೀ ಗುರುರಾಘವೇಂದ್ರ ಭಜನಾ ಮಂಡಳಿ ಚಿಟ್ಟೆಮಾರ್ ಪುತ್ತಿಗೆ, ಶ್ರೀ ಸೋಮನಾಥೇಶ್ವರ ಭಜನಾ ಮಂಡಳಿ ವರ್ಣಬೆಟ್ಟು, ಶ್ರೀ ಸೋಮನಾಥೇಶ್ವರ ಭಜನಾ ಮಂಡಳಿ ನೆಲ್ಲಿಗುಡ್ಡೆ ಪುತ್ತಿಗೆ ತಂಡಗಳು ಭಾಗವಹಿಸಿದವು.