ಜಿಲ್ಲೆ

ಗುಲ್ವಾಡಿ ಮಹಿಳೆ ಆತ್ಮಹತ್ಯೆ

ಇಂದಿರಾ ಎನ್ ಕೆ

ಕುಂದಾಪುರ: ಮಾನಸಿಕ ಕಾಯಿಲೆ ಹಾಗೂ ಎರಡೂ ಕಾಲಿನ ಗಂಟಿನ ನೋವಿನಿಂದ ಬಳಲುತ್ತಿದ್ದ ಗುಲ್ವಾಡಿ ಗ್ರಾಮದ ಕುಸುಮಾವತಿ (45) ಎಂಬುವರು ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಸುಮಾವತಿ ಮಕ್ಕಳೊಂದಿಗೆ ಮನೆಯಲ್ಲಿದ್ದು, ಪತಿ ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿದ್ದಾರೆ. 3-4 ವರ್ಷಗಳಿಂದ ಮಾನಸಿಕ ಕಾಯಿಲೆ ಹಾಗೂ ಎರಡೂ ಕಾಲುಗಂಟಿನ ನೋವಿನಿಂದ ಬಳಲುತ್ತಿದ್ದ ಅವರು ಮನನೊಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.