ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ನಂತರ ಮುಂದೇನು ಎನ್ನುವ ಗೊಂದಲದಲ್ಲಿರುತ್ತಾರೆ. ಪ್ರತಿ ವಿದ್ಯಾರ್ಥಿ ಪಾಲಕರೊಂದಿಗೆ ಪುತ್ತೂರು ಕಮ್ಯುನಿಟಿ ಸೆಂಟರ್‌ನ ಅನುಭವಿ ಸಮಾಲೋಚಕರ ಜತೆ ಸುಮಾರು 30 ನಿಮಿಷ ಚರ್ಚಿಸಿದ ಬಳಿಕ ವೃತ್ತಿ ಜೀವನದ ಬಗ್ಗೆ ತೀರ್ಮಾನಿಸಲು ಅನುವು ಮಾಡಿಕೊಡಲಾಗಿದೆ ಎಂದು ಎನ್‌ಎನ್‌ಒ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಹಾಗೂ ಟ್ರಸ್ಟ್ ಸದಸ್ಯ ಹುಸೇನ್ ಹೈಕಾಡಿ ಹೇಳಿದರು.
ಎನ್‌ಎನ್‌ಒ ಕುಂದಾಪುರ ಕಮ್ಯುನಿಟಿ ಸೆಂಟರ್, ಎನ್‌ಎನ್‌ಒ ವಿಷನರ್ಸ್ ಅಕಾಡೆಮಿ ಮತ್ತು ಪುತ್ತೂರು ಕಮ್ಯುನಿಟಿ ಸೆಂಟರ್ ಆಶ್ರಯದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವೈಯಕ್ತಿಕ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎನ್‌ಎನ್‌ಒ ಉಡುಪಿ ಜಿಲ್ಲಾ ಅಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳ್ವೆ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಘಟಕ ಉಪಾಧ್ಯಕ್ಷ ಮಮ್ದು ಇಬ್ರಾಹಿಂ ವಿದ್ಯಾರ್ಥಿಗಳಲ್ಲಿ ಸರ್ಕಾರಿ ವೃತ್ತಿಯ ಬಗ್ಗೆ ಅರಿವು ಮೂಡಿಸಿದರು. ಕೇಂದ್ರ ಸಮಿತಿ ಅಧ್ಯಕ್ಷ ಮೊಹಮ್ಮದ್ ಸಲೀಂ ಮೂಡುಬಿದಿರೆ, ಕುಂದಾಪುರ ಕಮ್ಯುನಿಟಿ ಸೆಂಟರ್ ಅಧ್ಯಕ್ಷ ಅಬ್ದುಲ್ ಮುನಾಫ್ ಹಂಗಾರಕಟ್ಟೆ ಮಾರ್ಗದರ್ಶನ ನೀಡಿದರು.
ಎನ್‌ಎನ್‌ಒ ಟ್ರಸ್ಟ್ ಸದಸ್ಯರಾದ ಪೀರು ಸಾಹೇಬ್ ಉಡುಪಿ, ಝಮೀರ್ ಅಹ್ಮದ್ ರಶಾದಿ, ಎನ್‌ಎನ್‌ಒ ಉಡುಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಿಹಾರ್ ಅಹ್ಮದ್ ಕುಂದಾಪುರ, ಮಾಜಿ ಉಪಾಧ್ಯಕ್ಷ ಎಸ್.ಎಂ.ಇರ್ಷಾದ್ ನೇಜಾರು, ಸದಸ್ಯ ಮೌಲಾನ ಫಝಲ್ ಕಂಡ್ಲೂರು, ಪುತ್ತೂರು ಕಮ್ಯುನಿಟಿ ಸೆಂಟರ್‌ನ ಹನೀಫ್ ಪುತ್ತೂರು, ರಫೀಕ್ ಮಾಸ್ಟರ್, ಇಮ್ತಿಯಾಜ್ ಸಾಹೇಬ್, ಇಂಜಿನಿಯರ್ ಅಸೋಸಿಯೇಷನ್ ಅಧ್ಯಕ್ಷ ಇಂಜಿನಿಯರ್ ಇಕ್ಬಾಲ್ ಕುಂದಾಪುರ, ಬ್ಯಾರೀಸ್ ಕಾಲೇಜು ಪ್ರಾಂಶುಪಾಲ ಡಾ.ಸಮೀರ್ ಉಪಸ್ಥಿತರಿದ್ದರು. ಬೈಂದೂರು ಘಟಕ ಅಧ್ಯಕ್ಷ ಅಬ್ದುಲ್ ಸಮಿ ಹಳಗೇರಿ ನಿರೂಪಿಸಿ, ವಂದಿಸಿದರು.