ಸಿರಿಗೇರಿ ಸಮೀಪದ ಮುದ್ದಟನೂರು ನವಗ್ರಾಮದಲ್ಲಿ ಮಂಗಗಳ ದಾಳಿಯಿಂದ ಅತಿಥಿ ಶಿಕ್ಷಕ ಪಾಂಡುರಂಗ ಗಾಯಗೊಂಡಿರುವುದು. 
ಜಿಲ್ಲೆ

ಅತಿಥಿ ಶಿಕ್ಷಕನ ಮೇಲೆ ಮಂಗಗಳ ದಾಳಿ

Kopala - Desk - Eraveni

ಸಿರಿಗೇರಿ: ಮುದ್ದಟನೂರು ಕ್ಯಾಂಪಿನ ನವಗ್ರಾಮದಲ್ಲಿ ಮಂಗಳವಾರ ಕರಿ ಮಂಗಗಳು ಅತಿಥಿ ಶಿಕ್ಷಕ ಪಾಂಡುರಂಗ ಅವರ ಮೇಲೆ ದಾಳಿ ನಡೆಸಿವೆ. ಇದರಿಂದಾಗಿ ಶಿಕ್ಷಕ ಗಾಯಗೊಂಡಿದ್ದು,

ಸ್ಥಳೀಯರು ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ. ಸಿರಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಗಾಯಾಳು ಪಾಂಡುರಂಗನ ಆರೋಗ್ಯ ವಿಚಾರಿಸಿದರು. ಸರ್ಕಾರದಿಂದ ಪರಿಹಾರ ಒದಗಿಸಲಾಗುವುದು. ಗ್ರಾಮ ಪಂಚಾಯಿತಿ ಸಹಾಯದಿಂದ ಮಂಗಳನ್ನು ಹಿಡಿಯುವ ಕಾರ್ಯಾಚರಣೆ ನಡೆಸುವುದಾಗಿ ಭರವಸೆ ನೀಡಿದರು.