ಉಳ್ಳಾಲ: ತೊಕ್ಕೊಟ್ಟು ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಗೂಡುದೀಪ ಸ್ಪರ್ಧಾ ಸಮಿತಿ ಆಶ್ರಯದಲ್ಲಿ 16ನೇ ವರ್ಷದ ‘ಗೂಡುದೀಪ ಸಂಗಮ 2024’ 5ನೇ ವರ್ಷದ ಸ್ಪರ್ಧೆ ನ.16ರಂದು ಸಂಜೆ 5ರಿಂದ ತೊಕ್ಕೊಟ್ಟು ಒಳಪೇಟೆ ಡಾ.ಬಿ.ಆರ್.ಅಂಬೇಡ್ಕರ್ ಮೈದಾನದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಜೀವನ್ ತೊಕ್ಕೊಟ್ಟು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಂಪ್ರದಾಯಿಕ, ಆಧುನಿಕ ಮತ್ತು ಪ್ರಾಕೃತಿಕ ಎಂಬ ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಅಲ್ಲದೆ ಭಗತ್‌ಸಿಂಗ್ ಸಾಧಕ ಪ್ರಶಸ್ತಿ ಪ್ರದಾನ ಸವಾರಂಭ ನಡೆಯಲಿದ್ದು, ಈ ಬಾರಿ ದಕ್ಷಿಣ ಕನ್ನಡ ಜಿಲ್ಲಾ ಸ್ವಚ್ಛತಾ ರಾಯಭಾರಿ ಎನ್.ಶೀನ ಶೆಟ್ಟಿ ಅವರನ್ನು ಪ್ರಶಸ್ತಿಗೆ ಆಯ್ಕೆ ವಾಡಲಾಗಿದೆ ಎಂದರು.
ಆಧುನಿಕ ಮತ್ತು ಪ್ರಾಕೃತಿಕ ವಿಭಾಗದಲ್ಲಿ ಪ್ರಥಮ ಬಹುವಾನ 7 ಸಾವಿರ ನಗದು ಹಾಗೂ ಸ್ಮರಣಿಕೆ, ದ್ವಿತೀಯ 5 ಸಾವಿರ ನಗದು ಮತ್ತು ಸ್ಮರಣಿಕೆ, ತೃತೀಯ ರೂ. 3ಸಾವಿರ ನಗದು ಮತ್ತು ಸ್ಮರಣಿಕೆ ನೀಡಲಾಗುವುದು.
ಸಾಂಪ್ರದಾಯಿಕ ವಿಭಾಗದಲ್ಲಿ ಪ್ರಥಮ 5 ಸಾವಿರ ನಗದು ಮತ್ತು ಸ್ಮರಣಿಕೆ, ದ್ವಿತೀಯ 3 ಸಾವಿರ ನಗದು ಮತ್ತು ಸ್ಮರಣಿಕೆ, ತೃತೀಯ 2 ಸಾವಿರ ನಗದು ಮತ್ತು ಸ್ಮರಣಿಕೆ ನೀಡಲಾಗುವುದು ಎಂದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯ ವೈಭವ, ರಾತ್ರಿ 9 ಕ್ಕೆ ‘ತೂಯಿಲೆಕ ಅತ್ತ್’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಪ್ರತಿಷ್ಠಾನದ ಗೌರವಾಧ್ಯಕ್ಷ ರಾಕೇಶ್ ಕುವಾರ್, ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ಕೋಶಾಧಿಕಾರಿ ಹರೀಶ್ ಅಂಬ್ಲಮೊಗರು, ಗೂಡುದೀಪ ಪ್ರಧಾನ ಕಾರ್ಯದರ್ಶಿ ದೀಕ್ಷಿತ್ ನಿಸರ್ಗ ಕುಂಪಲ ಗೋಷ್ಠಿಯಲ್ಲಿದ್ದರು.