ಹೂವಿನಹಿಪ್ಪರಗಿ: ಕಾಂಗ್ರೆಸ್ ಪ ಮಹಿಳೆಯರಿಗಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ ಮಹಿಳೆಯರ ಸ್ವಾವಲಂಬಿಯಾಗಿ ಬದುಕಲು ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಪ ಜಾರಿಗೊಳಿಸಿದೆ. ಇದರಿಂದ ಮಹಿಳೆಯರ ಗೌರವ ಹೆಚ್ಚಾಗಿದೆ ಎಂದು ವಿಜಯಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪದ ಅಭ್ಯರ್ಥಿ ಪ್ರೊ ರಾಜು ಆಲಗೂರ ಹೇಳಿದರು.
ದೇವರಹಿಪ್ಪರಗಿ ಮತೇತ್ರದ ವಡವಡಗಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ವಡವಡಗಿ ಗ್ರಾಮದಲ್ಲಿ ಗುರುವಾರ ಮತಯಾಚಿಸಿ ಮಾತನಾಡಿದ ಅವರು ಸಿದ್ದರಾಮಯ್ಯ ನೇತತ್ವದ ಸರ್ಕಾರ ತಂದಿರುವ ಐದು ಗ್ಯಾರಂಟಿಗಳು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಕೆಹಿಡಿಯಲಿದ್ದು ಪ್ರತಿಯೊಬ್ಬ ಕಾರ್ಯಕರ್ತ ಕೂಡ ನಾನೇ ಅಭ್ಯರ್ಥಿ ಎಂದು ಭಾವಿಸಿ ಪ್ರಚಾರ ನಡೆಸಬೇಕು.
ಸರ್ವ ಜನಾಂಗಕ್ಕೂ ಸಮಾಜಿಕ ನ್ಯಾಯ ನೀಡುವ ಪ ಯಾವದಾದರು ಇದ್ರೇ ಅದು ಕಾಂಗ್ರೆಸ್ ಪ ಮಾತ್ರ ಕಳೆದ ಬಾರಿ ಆಯ್ಕೆಯಾಗಿರುವ ಸಂಸದರು ಯಾವದೇ ಅಭಿವದ್ಧಿ ಕೆಲಸ ಮಾಡದೆ ನಾಪತ್ತೆಯಾಗಿದ್ದಾರೆ ಎಂದರು.
ನಾನು ಕಾಂಗ್ರೆಸ್ ಪದ ನಿಷ್ಟಾವಂತ ಕಾರ್ಯಕರ್ತನಾಗಿದ್ದು ನಿಮ್ಮ ಮನೆ ಮಗನಾಗಿ ನಿಮ್ಮ ಸಂಕಷ್ಟಗಳಿಗೆ ಸ್ಪಂದಿಸುತ್ತೇನೆ ಈ ಹಿನ್ನಲೆಯಲ್ಲಿ ಮೇ7 ರಂದು ಜರುಗುವ ಲೋಕಸಭಾ ಚುನಾವಣೆಯಲ್ಲಿ ಹಸ್ತದ ಗುರುತಿಗೆ ಮತ ನೀಡಿ ನಿಮ್ಮ ಸೇವೆ ಮಾಡಲು ಒಂದು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ ಈ ಬಾರಿ ಕಾಂಗ್ರೆಸ್ ಗೆಲುವಿಗೆ ಉತ್ತಮ ವಾತಾವರಣವಿದ್ದು ದೇಶದ ಸೌಹಾರ್ದಕ್ಕೆ ಧಕ್ಕೆ ತರುವ ಕೋಮುವಾದಿ ಶಕ್ತಿಗಳು ಅಕಾರಕ್ಕೆ ಬಂದರೆ ಅಶಾಂತಿ ವಾತವರಣ ಉಂಟಾಗುತ್ತದೆ. ದೇಶದ ಜನಸಾಮಾನ್ಯರ ಹಿತ ಕಾಪಾಡದೆ ಅಂಬಾನಿ,ಆದಾನಿಗಳ ವಿಕಾಸ ಮಾಡುವ ಆಡಳಿತವನ್ನು ದೇಶಕ್ಕೆ ನೀಡಿದ್ದಾರೆ ಎಂದ ಅವರು ಕೇಂದ್ರದ ಬಿಜೆಪಿ ಸರ್ಕಾರ ದಿನ ಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಜೀವನದ ಮೇಲೆ ಬರೆ ಏಳದಿದ್ದಾರೆ ಎಂದು ಟಿಕಿಸಿದರು.
ಕಾಂಗ್ರೆಸ್ ಪದ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದಗೌಡ ದೊಡ್ಡಮನಿ, ಬಿ ಎಸ್ ಪಾಟೀಲ ಯಾಳಗಿ, ಜಿಪಂ ಮಾಜಿ ಅಧ್ಯೆ ಸುಜಾತಾ ಕಳ್ಳಿಮನಿ, ಜಿಪಂ ಮಾಜಿ ಸದಸ್ಯೆ ಗೌರಮ್ಮ ಮುತ್ತತ್ತಿ ಮಾತನಾಡಿದರು ಈ ಸಂದರ್ಭದಲ್ಲಿ ಪದ ಮುಖಂಡರಾದ, ಸೋಮನಾಥ ಕಳ್ಳಿಮನಿ, ಪರಶುರಾಮ ದಿಂಡವಾರ, ದೇವರಹಿಪ್ಪರಗಿ ಬ್ಲಾಕ ಅಧ್ಯ ಬಶೀರಸೇಟ್ ಬೇಪಾರಿ, ಹೂವಿನಹಿಪ್ಪರಗಿ ಬ್ಲಾಕ ಅಧ್ಯ ಬಾಳಾಸಾಹೇಬಗೌಡ ಪಾಟೀಲ, ಹೂವಿನಹಿಪ್ಪರಗಿ ಮಹಿಳಾ ಬ್ಲಾಕ ಅಧ್ಯೆ ರಮಿಜಾ ನದಾ, ಸವಿತಾ ನಾಯಕ, ರಮಜಾನ ಮುಜಾವರ, ಬಾಪುಗೌಡ ಪಾಟೀಲ,ಪ್ರಕಾಶ ಗುಡಿಮನಿ, ಗುರುರಾಜ ಗುಡಿಮನಿ, ಮುತ್ತು ತಳವಾರ ಸೇರಿದಂತೆ ಪದ ಕಾರ್ಯಕರ್ತರು ಮುಖಂಡರು ಇದ್ದರು.