ಜಿಲ್ಲೆ

ಕುಂದಾಪುರದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ

ಇಂದಿರಾ ಎನ್ ಕೆ

ಕುಂದಾಪುರ: ತಾಲೂಕಿಗೆ ವಿವಿಧ ಗ್ಯಾರಂಟಿ ಯೋಜನೆಗಳಲ್ಲಿ ಆಗಸ್ಟ್‌ನಲ್ಲಿ ಒಟ್ಟು 10,22,18,732 ರೂ. ಬಂದಿದ್ದು, ಗೃಹಲಕ್ಷ್ಮೀ ಹಾಗೂ ಯುವನಿಧಿ ಅನುದಾನ ಬಂದಿಲ್ಲ. ಗೃಹಜ್ಯೋತಿಯಲ್ಲಿ 4,33,43,205 ರೂ., ಶಕ್ತಿ ಯೋಜನೆಯಲ್ಲಿ 2,67,94327 ರೂ., ಅನ್ನಭಾಗ್ಯದಲ್ಲಿ 3,20,81,200 ರೂ. ಬಂದಿದೆ. ಈವರೆಗೆ ಒಟ್ಟು 409,33,81960 ರೂ. ಬಂದಿದೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹೇಳಿದರು. ಕುಂದಾಪುರದ ತಾಲೂಕು ಪಂಚಾಯಿತಿನಲ್ಲಿ ಸೋಮವಾರ ನಡೆದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ವಾತನಾಡಿದರು. ಮರವಂತೆ ನಾಡ ಬಡಾಕೆರೆ ಬಸ್‌ಗೆ ಓಡಿಸಲು ಕೆಎಸ್‌ಆರ್‌ಟಿಸಿ ತಯಾರಿದ್ದರೂ, ಆರ್‌ಟಿಒ ಖಾಸಗಿ ಬಸ್ ವಾಲೀಕರ ಒತ್ತಡಕ್ಕೆ ಮಣಿದು ಪರ್ಮಿಟ್ ವಿಳಂಬ ಮಾಡುವುದು ಸರಿಯಲ್ಲ ಎಂದು ಸದಸ್ಯ ಗಣೇಶ ಕುಂಭಾಶಿ ಹೇಳಿದರು. ಇದಕ್ಕುತ್ತರಿಸಿದ ಅಧ್ಯಕ್ಷ ಹರಿಪ್ರಸಾದ್, ಶ್ರೀ ಪರ್ಮಿಟ್ ನೀಡುವಂತೆ ಮನವಿ ವಾಡಲಾಗುವುದು ಎಂದರು. ಪಡಿತರ ಚೀಟಿ ರದ್ದತಿ ಮತ್ತು ಬದಲಾವಣೆ ಬಗ್ಗೆ ವಾಹಿತಿ ನೀಡಿದ ಇಲಾಖೆ ಅಧಿಕಾರಿ, ಯಾವುದೇ ಪಡಿತರ ಚೀಟಿ ರದ್ದು ವಾಡುವುದಿಲ್ಲ. ಸುವಾರು 618 ಪಡಿತರ ಚೀಟಿಗಳ ಪರಿಶೀಲನೆ ವಾಡಲಾಗಿದ್ದು, ಈ ಪೈಕಿ 578 ಐಟಿ ಪಾವತಿದಾರರಾಗಿದ್ದಾರೆ. ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಮುಂದಿನ ತಿಂಗಳಿನಲ್ಲಿ ಪ್ರಾರಂಭವಾಗಲಿದೆ ಎಂದರು. ಸದಸ್ಯರಾದ ನಾರಾಯಣ ಆಚಾರ್ ಕೋಣಿ, ವಾಣಿ ಆರ್.ಶೆಟ್ಟಿ, ಆಶಾ ಕರ್ವಾಲೋ, ಸವಿತಾ ಪೂಜಾರಿ ಉಪಸ್ಥಿತರಿದ್ದರು. ತಾಲೂಕು ಪಂಚಾಯಿತಿ ವ್ಯಾನೇಜರ್ ರಾಮಚಂದ್ರ ಮಯ್ಯ ಸ್ವಾಗತಿಸಿದರು.