ಜಿಲ್ಲೆ

ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ

ಸೌಮ್ಯ ಆರ್

ಸುಳ್ಯ: ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆ ಬುಧವಾರ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಅಧ್ಯಕ್ಷತೆಯಲ್ಲಿ ನಡೆಯಿತು.

ಗೃಹಲಕ್ಷ್ಮೀ ಯೋಜನೆಗೆ ಮನೆ ಒಡತಿಯ ಥಂಬ್ ಹಾಗೂ ಆಧಾರ್ ಸಮಸ್ಯೆಯಿಂದಾಗಿ ಇನ್ನೂ ಕೆಲವರ ಹೆಸರು ಸೇರ್ಪಡೆಯಾಗದ ಬಗ್ಗೆ, ಸರ್ಕಾರಿ ಬಸ್ ರೂಟ್ ವಿಸ್ತರಣೆ ಆಗಿ ಉದ್ಘಾಟನೆ ಸಂದರ್ಭ ಸ್ಥಳೀಯ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರನ್ನು ಆಹ್ವಾನಿಸದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಗ್ರಾಮಮಟ್ಟದ ಕ್ಯಾಂಪ್‌ನಿಂದಾಗಿ 414 ಹೊಸ ಅರ್ಜಿಗಳು ಗೃಹಲಕ್ಷ್ಮೀ ಯೋಜನೆಗೆ ಸಲ್ಲಿಕೆಯಾಗಿವೆ ಎಂದು ಸಭೆಗೆ ತಿಳಿಸಲಾಯಿತು. ಈ ವೇಳೆ ವಾತನಾಡಿದ ಅಧ್ಯಕ್ಷ ಶಾಹುಲ್ ಹಮೀದ್, ಗ್ರಾಮಮಟ್ಟದ ಶಿಬಿರದಿಂದ ಉತ್ತಮ ಪ್ರಗತಿ ಸಿಕ್ಕಿದೆ. ಸರ್ಕಾರದ ಯೋಜನೆ ಪ್ರತಿಯೊಬ್ಬರಿಗೂ ಸಿಗಬೇಕು. ಮುಂದೆಯೂ ಶಿಬಿರ ನಡೆಸಲಾಗುವುದು ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಸಿಡಿಪಿಒ ಶೈಲಜಾ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಶಿರಸ್ತೆದಾರ್ ವಸಂತಿ, ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತೆ ಅನುರಾಧಾ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ಅಬೂಸಾಲಿ, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಮಂಜುಷಾ ತಮ್ಮ ಇಲಾಖೆಗಳ ಪ್ರಗತಿಯನ್ನು ತಿಳಿಸಿದರು. ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಮಣಿಕಂಠ ಕೊಳಗೆ, ರಾಜು ನೆಲ್ಲಿಕುಮೇರಿ, ಅಬ್ಬಾಸ್ ಅಡ್ಕ, ಧನುಷ್ ಕುಕ್ಕೆಟ್ಟಿ, ಭವಾನಿಶಂಕರ್ ಕಲ್ಮಡ್ಕ, ಕಾಂತಿ ಸಂಪಾಜೆ, ವಿಜೇಶ್ ಹಿರಿಯಡ್ಕ, ಲತೀಫ್ ಅಡ್ಕಾರು, ರವಿ ಗುಂಡಡ್ಕ, ಭವಾನಿ ಬೊಮ್ಮೆಟ್ಟಿ ಉಪಸ್ಥಿತರಿದ್ದರು.