ಜಿಲ್ಲೆ

ಇಂದಬೆಟ್ಟಿನಲ್ಲಿ ಗ್ಯಾರಂಟಿ ಅನುಷ್ಠಾನ ಶಿಬಿರ

Avinash R

ಬೆಳ್ತಂಗಡಿ: ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಶಿಬಿರವನ್ನು ಇಂದಬೆಟ್ಟಿನ ಸಂತ ಫ್ರಾನ್ಸಿಸ್ ಕ್ಲೇವಿಯರ್ ಚರ್ಚ್ ಸಭಾಂಗಣದಲ್ಲಿ ತಾಲೂಕು ಸಮಿತಿಯ ಅಧ್ಯಕ್ಷ ಬಿ.ಪದ್ಮನಾಭ ಸಾಲ್ಯಾನ್ ಉದ್ಘಾಟಿಸಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ಯಾರಂಟಿ ಯೋಜನೆಗಳ ತಾಲೂಕುಮಟ್ಟದ ಸದಸ್ಯ ಕಾರ್ಯದರ್ಶಿ ಮಾಹಿತಿ ನೀಡಿದರು. ಇಂದಬೆಟ್ಟು ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್‌ನ ಧರ್ಮಗುರು ಫಾ.ಸ್ಟ್ಯಾನಿ ಮೊಂತೇರೊ ಮಾತನಾಡಿದರು.

ಇಂದಬೆಟ್ಟು ಗ್ರಾಪಂ ಅಧ್ಯಕ್ಷೆ ಆಶಾಲತಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, ತಾಲೂಕು ಸಮಿತಿಯ ಸದಸ್ಯರಾದ ವಂದನಾ ಕುಮಾರಿ, ಕೆ.ನೇಮಿರಾಜ್ ಕಿಲ್ಲೂರು, ಹಕೀಂ ಕೊಕ್ಕಡ, ಸೌಮ್ಯಾ, ವೀರಪ್ಪ ಮೊಯ್ಲಿ, ವಾಸುದೇವ್ ರಾವ್, ಸತೀಶ್ ಹೆಗ್ಡೆ, ಅಬ್ದುಲ್ ಸಲಾಂ, ಮೆರಿಟಾ ಪಿಂಟೊ, ಶ್ರೀಪತಿ ಉಪಾಧ್ಯಾಯ, ಕೇಶವ ನಾಯ್ಕ, ಶರೀಫ್, ಮಲವಂತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಜೈನ್, ನಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ನಾವೂರು ಗ್ರಾಪಂ ಅಧ್ಯಕ್ಷೆ ಸುನಂದಾ, ಸಿಡಿಪಿಒ ಪ್ರಿಯಾ ಆಗ್ನೇಸ್, ಮೆಸ್ಕಾಂ ಎಇಇ ಕ್ಲೆಮೆಂಟ್ ಬೆಂಜಮಿನ್ ಬ್ರಾಗ್ಸ್, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಅರುಣ್ ಕುಮಾರ್, ಆಹಾರ ಇಲಾಖೆಯ ಶಿರಸ್ತೆದಾರ್ ವಿಶ್ವ ಉಪಸ್ಥಿತರಿದ್ದರು.

ಇಂದಬೆಟ್ಟು ಪಿಡಿಒ ರಶ್ಮಿ ಸ್ವಾಗತಿಸಿದರು. ನಾವೂರು ಪಿಡಿಒ ನಿರ್ಮಲ್ ಕುಮಾರ್ ವಂದಿಸಿದರು. ಮಿತ್ತಬಾಗಿಲು ಪಿಡಿಒ ಮೋಹನ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು.