ಉಪ್ಪುಂದ ಶ್ರೀ ಲಕ್ಷ್ಮೀವೆಂಕಟರಣ ದೇವಸ್ಥಾನದಲ್ಲಿ ಭಾನುವಾರ ಸ್ನೇಹ ಸಮ್ಮಿಲನ ಸಮಾರಂಭದಲ್ಲಿ ಭಜನ್ ಗಾಯಕ ಉಪ್ಪುಂದ ರಾಜೇಶ ಪಡಿಯಾರ, ದೇವಳ ಮಾಜಿ ಮ್ಯಾನೇಜರ್ ಬೆಳ್ಗಲ್‌ಕಟ್ಟೆ ರತ್ನಾಕರ ಪ್ರಭು ಅವರನ್ನು ಸನ್ಮಾನಿಸಲಾಯಿತು.  
ಜಿಲ್ಲೆ

ಗೌಡ ಸಾರಸ್ವತ ಸಮಾಜ ಲೋಕಕ್ಕೆ ಮಾದರಿ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಬೈಂದೂರು

ಸಂಘರ್ಷದ ಕುಲುಮೆಯಲ್ಲಿ ಹದಗೊಂಡು ಲೋಕಕ್ಕೆ ಗೌಡ ಸಾರಸ್ವತ ಸಮಾಜ ಮಾದರಿಯಾಗಿದೆ. ತಮ್ಮ ಬುದ್ಧಿ ಚಾತುರ್ಯದಿಂದ ರಾಜಾಶ್ರಯ ಗಳಿಸಿ ವ್ಯಾಪಾರ ವಹಿವಾಟುಗಳಲ್ಲಿ ಪ್ರಗತಿ ಸಾಧಿಸಿರುವ ಕೊಂಕಣಿ ಸಮಾಜದಷ್ಟು ಇತರ ಸಮಾಜ ಯಶಸ್ವಿ ಸಾಧಿಸಿಲ್ಲ ಎಂದು ಶಿರಾಲಿ ಎಸ್‌ಜಿಎಂ ದೇವಳ ಅಧ್ಯಕ್ಷ ಗೋಪಿನಾಥ ಕಾಮತ್ ಹೇಳಿದರು.

ಉಪ್ಪುಂದ ಶ್ರೀ ಲಕ್ಷ್ಮೀವೆಂಕಟರಣ ದೇವಸ್ಥಾನದಲ್ಲಿ ಯುವ ಜಿಎಸ್‌ಬಿ ಸೇವಾ ಸಂಘ ಭಾನುವಾರ ಸ್ನೇಹ ಸಮ್ಮಿಲನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗೋವಾ ಪೋರ್ಚುಗೀಸರ ವಶವಾದ ಬಳಿಕ ಅಲ್ಲಿನ ಲಕ್ಷಾಂತರ ಹಿಂದು ಕುಟುಂಬಗಳು ಬಲಾತ್ಕಾರದ ಮತಾಂತರಕ್ಕೆ ಒಳಗಾದವು. ಸ್ಥಳೀಯ ಸಂಸ್ಕೃತಿಯ ಜತೆಗೆ ಸಂಧಾನ ಮಾಡಿಕೊಂಡು ಕೊಂಕಣರು ಬದುಕು ಕಟ್ಟಿಕೊಂಡರು ಎಂದರು.

ಭಜನ್ ಗಾಯಕ ಉಪ್ಪುಂದ ರಾಜೇಶ ಪಡಿಯಾರ, ಮಾಜಿ ಮೊಕ್ತೇಸರ ಬೆಳ್ಗಲ್‌ಕಟ್ಟೆ ರತ್ನಾಕರ ಪ್ರಭು ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉದ್ಯಮಿ ಯು.ರಾಮಚಂದ್ರ ಪ್ರಭು, ಕುಂಜಾಲು ವೆಂಕಟೇಶ ಕಿಣಿ, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಯು.ರಾಜೇಶ ಪೈ ಇದ್ದರು. ಯು.ರಾಮಚಂದ್ರ ಪಡಿಯಾರ್ ಪ್ರಸ್ತಾವನೈದರು. ಅರ್ಚಕ ಯು.ವಿನಾಯಕ ಭಟ್ ವಂದಿಸಿದರು. ಓಂಗಣೇಶ್ ಕಾಮತ್ ನಿರೂಪಿಸಿದರು.

ಗೌಡ ಸಾರಸ್ವತರು ಸಮಾಜದ ಎಲ್ಲ ಸಮುದಾಯದವರ ಜತೆಗೆ ಬೆರೆಯುವವರು. ಅಸಮರ್ಥರನ್ನು ಸಮಾಜದಲ್ಲಿ ಮುಖ್ಯವಾಹಿನಿಗೆ ತರುವುದು ಉದ್ದೇಶ. ಈ ಹಿನ್ನೆಲೆಯಲ್ಲಿ ಕರಾವಳಿಯ ಎಲ್ಲ ಕಡೆಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಆರಂಭಿಸುವಲ್ಲಿ ಜಿಎಸ್‌ಬಿ ಪಾತ್ರ ದೊಡ್ಡದು.-ಕುಂಜಾಲು ವೆಂಕಟೇಶ ಕಿಣಿ ಬೈಂದೂರು