ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ವರ್ಧಂತಿ ಎಂದರೆ ಬಹುಮುಖವಾಗಿ ಬೆಳೆಯುವುದೆಂದು ಅರ್ಥ. ಸನ್ಯಾಸ ದೀಕ್ಷೆಯಾದ ನಂತರ ಇಡೀ ಸಮಾಜವೇ ಪರಿವಾರವಾಗಿ ಒಪ್ಪಿಕೊಂಡಿದೆ. ಧಾರ್ಮಿಕ ತಳಹದಿಯೊಂದಿಗೆ ಮಠದ ಜತೆಗೆ ಸೇರಿಕೊಂಡು ಸಮಾಜ ಬೆಳೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಕಟಪಾಡಿ ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.
ಪಡುಕುತ್ಯಾರು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದಲ್ಲಿ ಮಂಗಳವಾರ ನಡೆದ ಶ್ರೀಗಳ ಜನ್ಮವರ್ಧಂತ್ಯುತ್ಸವದ ಧರ್ಮಸಂಸತ್ತಿನಲ್ಲಿ ಆಶೀರ್ವಚನ ನೀಡಿದರು.
ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸ ಉಮೇಶ ಆಚಾರ್ಯ ಪಡೀಲು ಮಾತನಾಡಿ, ನೂರು ವರ್ಷಗಳಲ್ಲಿ ಪೀಠದಲ್ಲಿ ಯತಿಗಳಿಲ್ಲದೆ ಅನಾಥರಾಗಿದ್ದ ವಿಶ್ವಕರ್ಮ ಸಮಾಜಕ್ಕೆ ಯತಿಗಳ ದೀಕ್ಷೆ ಬಳಿಕ ಜ್ಞಾನ ಉದಯವಾಗುವ ಅನುಗ್ರಹ ಪ್ರಾಪ್ತಿಯಾಗಿದೆ ಎಂದರು.
ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಡೇರ ಹೋಬಳಿ ಶ್ರೀಧರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ವಿಶ್ವನಾಥ ಆಚಾರ್ಯ ದೋಹಾ ಕತಾರ್, ವೈದಿಕ ವಿದ್ವಾಂಸ ಶ್ರೀಧರ ಶರ್ಮ ಕಟಪಾಡಿ, ಲಕ್ಷ್ಮೀಕಾಂತ ಶರ್ಮ ಬಾರಕೂರು, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ.ವಿ.ಗಂಗಾಧರ ಆಚಾರ್ಯ, ಸಹ ಟ್ರಸ್ಟ್ ಸಮಿತಿಗಳ ಪದಾಧಿಕಾರಿಗಳಾದ ಬಿ.ಸೂರ್ಯಕುಮಾರ್ ಹಳೆಯಂಗಡಿ, ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಗಣೇಶ್ ಆಚಾರ್ಯ ಕೆಮಣ್ಣು, ವಿದ್ವಾನ್ ಕೇಶವ ಶರ್ಮಾ ಇರುವೈಲು, ಸುಂದರ ಆಚಾರ್ಯ ಬೆಳುವಾಯಿ, ವಿವಿಧ ದೇವಸ್ಥಾನದ ಧರ್ಮದರ್ಶಿಗಳಾದ ಮುರಹರಿ ಆಚಾರ್ಯ ಉಡುಪಿ, ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಕಳ, ಚಂದ್ರಯ್ಯ ಆಚಾರ್ಯ ಕಳಿ, ಬಾಲಕೃಷ್ಣ ಆಚಾರ್ಯ ಮೂಡಬಿದಿರೆ, ಗಜಾನನ ಎನ್.ಆಚಾರ್ಯ, ವೆಂಕಟ್ರಮಣ ಆಚಾರ್ಯ ಉಳುವಾರು, ಜನಾರ್ದನ ಆಚಾರ್ಯ ಆರಿಕ್ಕಾಡಿ, ನ್ಯಾಯವಾದಿ ಕೆ.ಪ್ರಭಾಕರ ಆಚಾರ್ಯ ಕೋಟೆಕಾರು, ಬಿ.ಯೋಗೀಶ್ ಆಚಾರ್ಯ ಬೆಂಗಳೂರು, ಜಗದೀಶ್ ಆಚಾರ್ಯ, ಕೆ.ನಾಗರಾಜ ಆಚಾರ್ಯ ಕಾಡಬೆಟ್ಟು, ಲೋಲಾಕ್ಷ ಶರ್ಮಾ ಪಡುಕುತ್ಯಾರು ಉಪಸ್ಥಿತರಿದ್ದರು.
ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ.ಆಚಾರ್ ಸ್ವಾಗತಿಸಿದರು. ಮೌನೇಶ ಶರ್ಮ ಮತ್ತು ಪಂಚಮ ಶರ್ಮ ಅಭಿನಂದನಾ ಪತ್ರ ವಾಚಿಸಿದರು. ಅರವಿಂದ ವೈ.ಆಚಾರ್ಯ ವಂದಿಸಿದರು. ಕೆ.ಎಂ.ಗಂಗಾಧರ ಕೊಂಡೆವೂರು ಮತ್ತು ಗೀತಾಚಂದ್ರ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.