ಜಿಲ್ಲೆ

ಕೆವಿಜಿ ಐಪಿಎಸ್‌ನಲ್ಲಿ ಗುಂಪು ಚರ್ಚೆ

Avinash R

ಸುಳ್ಯ: ನಗರದ ಕೆವಿಜಿ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ (ಐಪಿಎಸ್) ವಿದ್ಯಾರ್ಥಿಗಳ ಮಾತಿನ ಕೌಶಲ ಮತ್ತು ಜ್ಞಾನದ ಬೆಳವಣಿಗೆಗೆ ಗುಂಪು ಚರ್ಚಾ ಕಾರ್ಯಾಗಾರ ಆಯೋಜಿಸಲಾಯಿತು.

ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಟ್ರೈನಿಂಗ್ ಮತ್ತು ಪ್ಲೇಸ್‌ಮೆಂಟ್ ಡಿಪಾರ್ಟ್‌ಮೆಂಟ್‌ನ ಪ್ರೊ.ಪ್ರಶಾಂತ್ ಕೆ.ತರಬೇತುದಾರರಾಗಿ ಆಗಮಿಸಿ, ವಿದ್ಯಾರ್ಥಿಗಳಿಗೆ ಗುಂಪು ಚಟುವಟಿಕೆಯ ಕುರಿತು ಮಾರ್ಗದರ್ಶನ ನೀಡಿದರು.

ಹತ್ತನೇ ತರಗತಿಯ ಆದಿತ್ ರೈ, ಅನೀಶ್, ಅದ್ವೈತ್, ಉತ್ಸವ್, ಧನ್ವಿ, ಸಾನ್ವಿ ಮತ್ತು ಸಮೃದಿ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ-2020 ಎಂಬ ವಿಷಯದ ಬಗ್ಗೆ ಗುಂಪು ಚರ್ಚೆ ನಡೆಸಿದರೆ, 9ನೇ ತರಗತಿಯ ವಿದ್ಯಾರ್ಥಿಗಳಾದ ಸಲ್ಮಾನುಲ್ ಫಾರೀಸ್, ಕೃತಾರ್ಥ್, ಮನ್ವಿತಾ, ಶ್ರದ್ಧಾ ಪೈ, ಸೋನಾ ನಾರ್ಕೋಡು ಮತ್ತು ಅಲಿಸ್ಟ ಸಾರಾ ಜಾಗತಿಕ ತಾಪಮಾನಕ್ಕೆ ಕಾರಣ, ಪರಿಣಾಮ ಮತ್ತು ಅದರ ಪರಿಹಾರದ ಬಗ್ಗೆ ಗುಂಪು ಚರ್ಚೆ ನಡೆಸಿದರು.

ಪ್ರಾಂಶುಪಾಲ ಅರುಣ್ ಕುಮಾರ್ ಅಧ್ಯಯನದಲ್ಲಿ ಗುಂಪು ಚರ್ಚೆಯ ಮಹತ್ವದ ಕುರಿತು ಮಾತನಾಡಿದರು. ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರೊ.ಆಕಾಶ್, ಪ್ರೊ.ರಮ್ಯ, ಪ್ರೊ.ಶ್ರುತಿ, ಕೆವಿಜಿ ಐಪಿಎಸ್‌ನ ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ಶಾಲಾ ಸಾಂಸ್ಕೃತಿಕ ಸಂಯೋಜನಾಧಿಕಾರಿ ಪ್ರಜ್ಞಾ ಡಿ.ಆರ್.ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.