ಜಿಲ್ಲೆ

ಶಿವರಾಮ ಶೆಟ್ಟಿ ಸ್ಮರಣಾರ್ಥ ದಿನಸಿ ವಿತರಣೆ

ಬ್ರಹ್ಮಾವರ: ನಿವೃತ್ತ ಮುಖ್ಯ ಶಿಕ್ಷಕ ಮಟಪಾಡಿ ಶಿವರಾಮ ಶೆಟ್ಟಿ ಅವರ 9ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಅವರ ಮಕ್ಕಳಾದ ಬಸ್ರೂರು ರಾಜೀವ ಶೆಟ್ಟಿ ಮತ್ತು ಸಹೋದರರು ಬಂಡೀಮಠದ ಕೊರಗ ಕಾಲನಿಯ ಹತ್ತು ಕುಟುಂಬಗಳಿಗೆ ಗೃಹೋಪಯೋಗಿ ಉಪಕರಣ ಮತ್ತು ದಿನಸಿ ಸಾಮಗ್ರಿಯನ್ನು ಸೋಮವಾರ ವಿತರಿಸಿದರು.

ನಿವೃತ್ತ ಪ್ರಾಂಶುಪಾಲ ಡಾ.ಗಣನಾಥ್ ಎಕ್ಕಾರು ಮಾತನಾಡಿ, ಅತೀ ಹಿಂದುಳಿದ ಬುಡಕಟ್ಟು ಜನಾಂಗವನ್ನು ಬೆಂಬಲಿಸಿ ಸಮಾನತೆಗೆ ಶ್ರಮಿಸುವುದು ನೈಜ ಸಮಾಜಸೇವೆ. ತಂದೆಯ ಹೆಸರನ್ನು ಅವರ ಇಚ್ಛೆಗೆ ಅನುಗುಣವಾಗಿ ಮಕ್ಕಳು ಉಳಿಸಿಕೊಂಡರೆ ಅದು ಅವರ ಆತ್ಮಕ್ಕೆ ನೀಡುವ ಗೌರವ ಎಂದರು.

ಶಿವರಾಮ ಶೆಟ್ಟಿ ಪುತ್ರ ಡಾ.ದೇವದಾಸ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಹನೆಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಿಕಾ ಪೂಜಾರಿ, ಮಾಜಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಉಪಾಧ್ಯಕ್ಷ ಚಂದ್ರಮರಕಾಲ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸುಧೀರ್ ಶೆಟ್ಟಿ, ಕೊರಗ ಮುಖಂಡ ಗಣೇಶ್ ಬಾರಕೂರು ಇನ್ನಿತರು ಇದ್ದರು.