ಕೋಟ: ಕೋಡಿ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಪರಿಸರಸ್ನೇಹಿ ಹಸಿರು ಜೀವ ಅಭಿಯಾನಕ್ಕೆ ಹೊಸಬೆಂಗ್ರೆ ಪರಿಸರದಲ್ಲಿ ಕೋಡಿ ಮೀನುಗಾರಿಕೆ ಸೊಸೈಟಿ ನಿರ್ದೇಶಕ ಲಕ್ಷ್ಮಣ್ ಸುವರ್ಣ ಮನೆಯಲ್ಲಿ ಗಿಡ ನಡುವ ಮೂಲಕ ಚಾಲನೆ ನೀಡಲಾಯಿತು.
ಗೀತಾನಂದ ಫೌಂಡೇಶನ್ ಮಣೂರು, ಪಂಚವರ್ಣ ಸಂಟನೆ ಕೋಟ ಇವರ ಸಂಯೋಜನೆಯೊಂದಿಗೆ ಶಿಶು ಅಭಿವೃದ್ಧಿ ಯೋಜನೆ ಬ್ರಹ್ಮಾವರ, ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ ಹಾಗೂ ಎಸ್‌ಎಲ್‌ಆರ್‌ಎಂ ಟಕ ಕೋಡಿ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು.
ಕೋಡಿ ಗ್ರಾಪಂ ಅಧ್ಯಕ್ಷೆ ಗೀತಾ ಖಾರ್ವಿ, ಸದಸ್ಯ ಪ್ರಭಾಕರ್ ಮೆಂಡನ್ ಮತ್ತು ಕೃಷ್ಣ ಪೂಜಾರಿ, ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಪೂರ್ಣಿಮಾ, ವಾಜಿ ಅಧ್ಯಕ್ಷೆ ದೀಪಾ ಆರ್.ಖಾರ್ವಿ, ಕೋಡಿಕನ್ಯಾನ ಅಂಗನವಾಡಿ ಕಾರ್ಯಕರ್ತೆ ಪ್ರೀತಿ ಎಸ್. ಹಾಗೂ ಕೋಡಿತಲೆ ಅಂಗನವಾಡಿ ಕಾರ್ಯಕರ್ತೆ ನಿರೋಷಾ, ಎಸ್‌ಎಲ್‌ಆರ್‌ಎಂ ಸಿಬ್ಬಂದಿ ಕಿರಣ್ ಪುತ್ರನ್ ಮೊದಲಾದವರು ಉಪಸ್ಥಿತರಿದ್ದರು. ಹೊಸಬೆಂಗ್ರೆ ಅಂಗನವಾಡಿ ಕಾರ್ಯಕರ್ತೆ ಯಮುನಾ ಎಲ್.ಕುಂದರ್ ಕಾರ್ಯಕ್ರಮ ನಿರ್ವಹಿಸಿದರು.