ಶಾಸಕ ಗುರುರಾಜ್ ಗಂಟಿಹೊಳೆ  
ಜಿಲ್ಲೆ

ಕೊರಗ ಸಮುದಾಯಗಳ ಪ್ರದೇಶಾಭಿವೃದ್ಧಿಗೆ ಅನುದಾನ

ಇಂದಿರಾ ಎನ್ ಕೆ

ಕುಂದಾಪುರ: ಕೇಂದ್ರ ಸರ್ಕಾರದ ಪಿಎಂ ಜನ್‌ಮನ್ ಯೋಜನೆಯಡಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊರಗ ಸಮುದಾಯ ಪ್ರದೇಶಗಳ ಅಭಿವೃದ್ಧಿಗೆ 4.39 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಪಿಎಂ ಜನ್‌ಮನ್ (ಪ್ರಧಾನಮಂತ್ರಿ ಜನ ಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ) ಯೋಜನೆಯಡಿ ನೈಜ ದುರ್ಬಲ ಬುಡಕಟ್ಟು ಸಮುದಾಯಗಳ ಸಾವಾಜಿಕ ಆರ್ಥಿಕ ಸ್ಥಿತಿಗತಿಗಳ ಸುಧಾರಣೆ ನಿಟ್ಟಿನಲ್ಲಿ ಹೊಸ ಅಭಿಯಾನ ಆರಂಭಿಸಿದ್ದು, ಕರ್ನಾಟಕ ರಾಜ್ಯದಲ್ಲಿ ಕೊರಗ ಮತ್ತು ಜೇನು ಕುರುಬ ಸಮುದಾಯಗಳಿವೆ.

ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2024ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ವಂಡ್ಸೆ, ಹರ್ಕೂರು ಹಾಗೂ ಇಡೂರು ಭಾಗದ ಕೊರಗ ಸಮುದಾಯದ ಮನೆಗಳಿರುವ ಪ್ರದೇಶಗಳ ಸಂಪರ್ಕ ರಸ್ತೆಗಳ ಅಭಿವೃದ್ಧಿಗಾಗಿ ಸಂಸದ ಬಿ.ವೈ.ರಾಘವೇಂದ್ರ ಅವರ ಮುತುವರ್ಜಿಯಿಂದ ಅನುದಾನ ಮಂಜೂರು ಮಾಡಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.