ಪಡುಬಿದ್ರಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕಾಪು ತಾಲೂಕು ಕರಂದಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಮಂಜೂರಾದ 3 ಲಕ್ಷ ರೂಪಾಯಿ ಅನುದಾನ ಡಿಡಿಯನ್ನು ದೇವಸ್ಥಾನ ಸಮಿತಿಗೆ ಹಸ್ತಾಂತರಿಸಲಾಯಿತು.
ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ನವೀನ್ ಅಮಿನ್, ಎಸ್‌ಕೆಆರ್‌ಡಿಪಿ ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ, ಮಜೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು, ದೇವಸ್ಥಾನ ಆಡಳಿತ ಸಮಿತಿ ಪದ್ಮನಾಭ ಶ್ಯಾನುಭೋಗ, ನಾಗಭೂಷಣ್ ರಾವ್, ರವಿರಾಜ ಶೆಟ್ಟಿ, ಶ್ರೀಧರ್ ಶೆಟ್ಟಿಗಾರ್, ನಿರ್ಮಲ್‌ಕುಮಾರ್ ಹೆಗ್ಡೆ, ಪ್ರಜ್ಞಾ ಮಾರ್ಪಳ್ಳಿ, ಗೋಪಾಲ್ ನಾಯಕ್, ಜನಜಾಗೃತಿ ವೇದಿಕೆ ಸದಸ್ಯ ಜನಾರ್ದನ್ ಆಚಾರ್ಯ ಕಳತ್ತೂರು ಗ್ರಾಪಂ ಸದಸ್ಯರಾದ ಭಾಸ್ಕರ, ಶರ್ಮಿಳಾ ಆಚಾರ್ಯ, ಮಜೂರು ಒಕ್ಕೂಟ ಅಧ್ಯಕ್ಷ ಪ್ರಸಾದ್ ಆಚಾರ್ಯ ಉಪಸ್ಥಿತರಿದ್ದರು.