ವಿಜಯವಾಣಿ ಸುದ್ದಿಜಾಲ ಕೋಟ
ಲೋಕಸಭಾ ಚುನಾವಣೆಯಲ್ಲಿ ಭಾರಿ ಅಂತರದಲ್ಲಿ ಜಯ ಗಳಿಸಿದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಹುಟ್ಟೂರಲ್ಲಿ ಭವ್ಯ ಸ್ವಾಗತ ಕೋರಲಾಯಿತು.
ಸಾಸ್ತಾನದ ಮಾಬುಕಳದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹಾರ ತೊಡಿಸಿ, ಪಟಾಕಿ ಸಿಡಿಸಿ ಬರಮಾಡಿಕೊಂಡರು. ಸಾಸ್ತಾನ ಬಸ್ ತಂಗುದಾಣ, ಸಾಲಿಗ್ರಾಮ ಸೇರಿದಂತೆ ಹುಟ್ಟೂರು ಕೋಟದವರೆಗೆ ಅಭಿಮಾನಿಗಳು, ಕಾರ್ಯಕರ್ತರು ಸ್ವಾಗತ ಕೋರಿದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬಿಜೆಪಿ ರಾಜ್ಯ ಮುಖಂಡ ಐರೋಡಿ ವಿಠ್ಠಲ್ ಪೂಜಾರಿ, ಕುಂದಾಪುರ ಕ್ಷೇತ್ರಾಧ್ಯಕ್ಷ ಸುರೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಧೀರ್ ಕೆ.ಎಸ್., ಯುವಮೋರ್ಚಾ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ, ಮಾಜಿ ಕ್ಷೇತ್ರಾಧ್ಯಕ್ಷ ಶಂಕರ್ ಅಂಕದಕಟ್ಟೆ, ಮುಖಂಡರಾದ ರಾಜೇಶ್ ಕಾವೇರಿ, ಶ್ಯಾಮಸುಂದರ್ ನಾಯರಿ, ಸುರೇಶ್ ಕುಂದರ್, ರಾಜು ಪೂಜಾರಿ, ಅಜಿತ್ ಶೆಟ್ಟಿ ಕೊತ್ತಾಡಿ, ಗೋವಿಂದ ಪೂಜಾರಿ, ರವೀಂದ್ರ ತಿಂಗಳಾಯ, ರಮೇಶ್ ಕಾರಂತ, ಶಂಕರ್ ಕುಲಾಲ್, ವಿಜಯ್ ಪೂಜಾರಿ, ನಟರಾಜ ಗಾಣಿಗ, ಪ್ರತಾಪ್ ಶೆಟ್ಟಿ, ಸುರೇಶ್ ಪೂಜಾರಿ, ಸುಲತಾ ಹೆಗ್ಡೆ, ಸುದಿನಾ ಕೋಡಿ, ರಾಜು ಶ್ರೀಯಾನ್, ಕಿರಣ್ ಅಚ್ಲಾಡಿ, ಕೃಷ್ಣ ಪೂಜಾರಿ ಮತ್ತಿತರರಿದ್ದರು.