ಬಾಲಗಣೇಶ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯಂದು ಪ್ರತಿಷ್ಠಾಪನೆಗೊಂಡ ಗಣೇಶ ವಿಗ್ರಹ ವೈಭವಯುತ ಶೋಭಾಯಾತ್ರೆಯೊಂದಿಗೆ ಜಲಸ್ತಂಭನ ಮಾಡಲಾಯಿತು 
ಜಿಲ್ಲೆ

ಗಣೇಶ ವಿಗ್ರಹ ಜಲಸ್ತಂಭನ

ಇಂದಿರಾ ಎನ್ ಕೆ

ಪಡುಬಿದ್ರಿ: ಇಲ್ಲಿನ ಬಾಲಗಣೇಶ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯಂದು ಪ್ರತಿಷ್ಠಾಪನೆಗೊಂಡ ಗಣೇಶ ವಿಗ್ರಹ ವೈಭವಯುತ ಶೋಭಾಯಾತ್ರೆಯೊಂದಿಗೆ ಪಡುಬಿದ್ರಿ ಸಮುದ್ರದಲ್ಲಿ ಶನಿವಾರ ಜಲಸ್ತಂಭನ ಮಾಡಲಾಯಿತು. ಗಣೇಶ ಚತುರ್ಥಿಯಿಂದ ನವರಾತ್ರಿಯಾದ್ಯಂತ ಪ್ರತಿದಿನ ಸಾಯಂಕಾಲ ಭಕ್ತರಿಂದ ರಂಗಪೂಜೆ ಸೇವೆ ಸಲ್ಲಿಕೆ ಇಲ್ಲಿ ಅನುಚಾನವಾಗಿ ನಡೆದು, ವಿಜಯದಶಮಿಯಂದು ಬೆಳಗ್ಗಿನಿಂದ ಪೂಜಾ ವಿಧಿವಿಧಾನಗಳು ಸಂಪನ್ನಗೊಂಡಿತು.

ಸಂಜೆ ಪಲ್ಲಕ್ಕಿಯ ಮೂಲಕ ಗಣಪತಿಯ ಮೂರ್ತಿ ಶ್ರೀ ಕ್ಷೇತ್ರದಿಂದ ಕುಣಿತ ಭಜನಾ ತಂಡ, ವಿವಿಧ ವೇಷಗಳು, ಹುಲಿವೇಷ ಕುಣಿತ ಮೆರವಣಿಗೆಯಲ್ಲಿ ಪೇಟೆಗೆ ಸಾಗಿ ಅಲ್ಲಿಂದ ಕೆಳಗಿನ ಪೇಟೆಯ ರಸ್ತೆಯ ಮೂಲಕ ಬೀಚ್ ರಸ್ತೆಗೆ ಸಾಗಿ ಗುಡ್ಡೆಚ್ಚಿಗೆ ತಲುಪಿ ಅಲ್ಲಿ ಕಟ್ಟೆ ಪೂಜೆ, ತಪ್ಪಂಗಾಯಿ ಬಳಿಕ ಮುಂದೆ ಸಾಗಿ ಸಮುದ್ರದಲ್ಲಿ ಮೂರ್ತಿ ಜಲಸ್ತಂಭನ ನೆರವೇರಿಸಲಾಯಿತು.