ಜಿಲ್ಲೆ

ಮಣ್ಣಿನ ಅರಿವು ಮೂಡಿಸುವ ಕಾರ್ಯ : ಗ್ರಾಮೋತ್ಸವದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಹೇಳಿಕೆ

ಸೌಮ್ಯ ಆರ್

ಕಿನ್ನಿಗೋಳಿ: ಯುವ ಪೀಳಿಗೆಗೆ ಮಣ್ಣಿನ ಅರಿವು ಮೂಡಿಸುವ ಕೆಸರು ಗದ್ದೆ ಕ್ರೀಡೋತ್ಸವ ಅಭಿನಂದನೀಯ ಇಂತಹ ಕಾರ್ಯಕ್ರಮಗಳು ನಿರಂತರ ನಡೆಯಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನದ ಬಾಕಿಮಾರು ಗದ್ದೆಯಲ್ಲಿ ಮೂರನೇ ವರ್ಷದ ಗ್ರಾಮೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಹಳ್ಳಿಗಳಲ್ಲಿ ಕೃಷಿಕರು ಬಳಸುತ್ತಿದ್ದ ಕಳಸ, ನೊಗ, ನೇಗಿಲು, ಮುಟ್ಟಲೆ, ಗಾಳ, ನೇಜಿ, ಕಂಬಳದ ಕೋಣ, ಬುಟ್ಟಿ, ಮಡಕೆ ಪಾತ್ರೆಗಳು, ಹಾರೆ, ಪಿಕ್ಕಾಸು, ಅಂಕದ ಕೋಳಿ, ಸೇಮಿಗೆ ಮಣೆ, ಗ್ಯಾಸ್‌ಲೈಟ್, ಹುಲ್ಲಿನ ಹೊರೆ, ಕುತ್ತರಿ, ದಂಬೆ, ಹಾಲಿನ ಪಾತ್ರೆ ಹೀಗೆ ಅನೇಕ ವಸ್ತುಗಳ್ನು ಹಿಡಿದ ಯುವಕರು ಯುವತಿಯರು, ಮಕ್ಕಳೆಲ್ಲರೂ ಹೊತ್ತುಕೊಂಡು ಗದ್ದೆಗಿಳಿಯುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಯುವ ನಾಯಕ ಮಿಥುನ್ ರೈ, ವೇದವ್ಯಾಸ ಉಡುಪ ದೇವಸ್ಯ ಮಠ, ಗುತ್ತಿನಾರ್ ನಿತಿನ್ ಶೆಟ್ಟಿ ಕೊಡೆತ್ತೂರುಗುತ್ತು, ಜಯರಾಮ ಮುಕ್ಕಾಲ್ದಿ ಭಂಡಾರಮನೆ, ಲೋಕೇಶ್ ಶೆಟ್ಟಿ ಬರ್ಕೆ, ನಂದನ್ ಮಲ್ಯ, ದೊಡ್ಡಯ್ಯ ಮೂಲ್ಯ ಕಟೀಲು, ಧನಂಜಯ ಶೆಟ್ಟಿಗಾರ್ ಸಾಗರಿಕಾ, ನಿಶಾಂತ್ ಶೆಟ್ಟಿ ಕಿಲೆಂಜೂರು, ರಂಜಿತ್ ಪೂಜಾರಿ ತೋಡಾರು, ಶ್ರೀಧರ ಆಳ್ವ ಮಾಗಂದಡಿ, ಶೋಭಾ ಶೆಟ್ಟಿ ನಡ್ಯೋಡಿಗುತ್ತು, ಸುಧಾಕರ ಶಿಬರೂರು, ಅಭಿಲಾಷ್ ಶೆಟ್ಟಿ ಕಟೀಲು, ಜಯಂತ ಕರ್ಕೇರ, ವಿಜಯ ಶೆಟ್ಟಿ ಅಜಾರುಗುತ್ತು, ಮೋಹನ ಶೆಟ್ಟಿ ದೇವಸ್ಯ, ದಿನೇಶ್ ಆಚಾರ್ಯ, ರವಿ ಶೆಟ್ಟಿ ಬರ್ಕೆ, ಯಶೋದರ್, ಲೋಕಯ್ಯ ಸಾಲ್ಯಾನ್ ಕೊಂಡೆಲಾ, ಸುಶೀಲ ರೈ, ಗೋಪಾಲ ಕೊಡೆತ್ತೂರು, ಶಶಿಧರ ಶೆಟ್ಟಿ, ಪ್ರಥ್ವಿರಾಜ್ ಆಚಾರ್ಯ ಗ್ರಾಮೋತ್ಸವ ಸಮಿತಿ ರಾಜೇಶ್ ಕುಂದರ್, ಪ್ರೇಮ್‌ರಾಜ್, ಶೈಲೇಶ್ ಅಂಚನ್ ಮತ್ತಿತರರು ಉಪಸ್ಥಿತರಿದ್ದರು. ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು ಸ್ವಾಗತಿಸಿದರು. ಪ್ರಕಾಶ್ ಆಚಾರ್ಯ ವಂದಿಸಿದರು.