ತುಮಕೂರು: ಗ್ರಾಮ ಪಂಚಾಯಿತಿ ಚುನಾವಣೆ ಹಲವು ವಿಶೇಷಗಳಿಗೆ ಸಾಕ್ಷಿಯಾಗಿದ್ದು, ನಿನ್ನೆ ಫಲಿತಾಂಶ ಪ್ರಕಟವಾಗಿದೆ. ಇದೇ ವೇಳೆ, ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಜಂಗಮರಹಳ್ಳಿಯ ಮತಪೆಟ್ಟಿಗೆಯಲ್ಲಿ ಮತಪತ್ರದ ಬದಲು ಸಿಕ್ಕ ಮತಪತ್ರ ರಾಜ್ಯದ ಗಮನಸೆಳೆದಿದೆ.
ಮತದಾರ ಹಾಕಿದ್ದ ಅನಾಮಧೇಯ ಪತ್ರದ ಒಕ್ಕಣೆ ಹೀಗಿದೆ - ಮೇಲ್ಕಂಡ ಯಾವುದೇ ಅಭ್ಯರ್ಥಿಗಳಿಗೂ ನನ್ನ ಮತವಿಲ್ಲ. ಕಾರಣ - ನಮ್ಮ ಗ್ರಾಮಕ್ಕೆ ಉತ್ತಮಗುಣಮಟ್ಟದ ರಸ್ತೆ, ಉತ್ತಮ ಗುಣಮಟ್ಟದ ವಿದ್ಯುತ್ ದೀಪಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ, ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಗ್ರಂಥಾಲಯ ಬರುವ ತನಕ ನಾನು ಚುನಾವಣೆಯನ್ನು ಬಹಿಷ್ಕರಿಸುತ್ತೇನೆ. ಪ್ರತಿ ಗ್ರಾಮ ಪಂಚಾಯಿತಿಗೆ 7.20 ಕೋಟಿ ರೂಪಾಯಿ ಅನುದಾನ ಬರುತ್ತದೆ. ಇದರ ಸದುಪಯೋಗ ಆಗಬೇಕು. ಸಾರ್ವಜನಿಕರ ಹಣ ಸಾರ್ವಜನಿಕ ಬಳಕೆಗೆ ಸಿಗಬೇಕು. ದಯವಿಟ್ಟು ಗ್ರಾಮ ಪಂಚಾಯಿತಿ ಚುನಾವಣೆಗೂ ನೋಟಾ ಆಯ್ಕೆ ತನ್ನಿ.
ಇದನ್ನೂ ಓದಿ: ಭೀಕರ ಸ್ಫೋಟಕ್ಕೆ 25 ಬಲಿ, 110ಕ್ಕೂ ಹೆಚ್ಚು ಜನರಿಗೆ ಗಾಯ: ವಿಮಾನ ನಿಲ್ದಾಣದಲ್ಲಿದ್ದ ಪ್ರಧಾನಿ ಟಾರ್ಗೆಟ್ ಆಗಿದ್ರಾ?!
ನಿನ್ನೆ ಮತ ಎಣಿಕೆ ವೇಳೆ ಈ ಮನವಿ ಪತ್ರ ದೊರಕಿದ್ದು, ಪಂಚಾಯಿತಿ ವ್ಯವಸ್ಥೆಯಲ್ಲಿ ಆಗಬೇಕಾದ ಬದಲಾವಣೆಗೆ ಕನ್ನಡಿ ಹಿಡಿದಂತಿದೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..