ಜಿಲ್ಲೆ

ಗ್ರಾಮಾಯಣ: ಚುನಾವಣೆಗೂ ಮೊದಲೇ ಸೋಲಿನ ಭೀತಿಗೆ ಅಭ್ಯರ್ಥಿ ಆತ್ಮಹತ್ಯೆ?!

shastrimath

ಧಾರವಾಡ: ಗ್ರಾಮ ಪಂಚಾಯಿತಿ ಚುನಾವಣೆಯ ಮೊದಲ ಹಂತದ ಮತದಾನ ಇಂದು ನಡೆಯುತ್ತಿದ್ದು, ಅನೇಕ ವಿಚಾರಗಳು ಗಮನಸೆಳೆಯತೊಡಗಿವೆ. ಇವುಗಳ ನಡುವೆ, ಸೋಲಿನ ಭೀತಿಗೆ ಅಭ್ಯರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಮನಕಲಕುವ ಸಂಗತಿ ಬೆಳಕಿಗೆ ಬಂದಿದೆ.

ಗರಗ ಗ್ರಾಮದ ಗ್ರಾಮ ಪಂಚಾಯಿತಿಯ ಎರಡನೇ ವಾರ್ಡಿನ ಅಭ್ಯರ್ಥಿ ದಾಮೋದರ ಕೃಷ್ಣಪ್ಪ ಎಲಿಗಾರ ಆತ್ಮಹತ್ಯೆ ಮಾಡಿಕೊಂಡವರು. ವಿಶಾಲ ಕೋ ಆಪರೇಟಿವ್ ಸೊಸೈಟಿಯಲ್ಲಿ ಪಿಗ್ಮಿ ಏಜೆಂಟ್ ಆಗಿ ಕೆಲಸ ಮಾಡಿಕೊಂಡಿದ್ದ ದಾಮೋದರ ಕೃಷ್ಣಪ್ಪ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದರು. ವಿಶಾಲ ಕೋ ಆಪರೇಟಿವ್ ಸೊಸೈಟಿ ಎಂಎಲ್​ಎ ಅಮೃತ ದೇಸಾಯಿ ಅವರ ಮಾಲೀಕತ್ವದಲ್ಲಿದೆ.

ಬೆಳಗ್ಗೆ ಮತದಾನ ಆರಂಭವಾದ ಸಮಯಕ್ಕೆ ಮತಕೇಂದ್ರಕ್ಕೆ ಭೇಟಿ ನೀಡಿದ್ದ ದಾಮೋದರ ಕೃಷ್ಣಪ್ಪ ಎಲಿಗಾರ ಬಳಿಕ ಮನೆಗೆ ವಾಪಸಾಗಿದ್ದರು. ಮನೆಯ ಅಟ್ಟಕ್ಕೇರಿದ ಅವರು ಬಳಿಕ ಕೆಳಗೆ ಇಳಿಯಲಿಲ್ಲ. ಸಂದೇಹಗೊಂಡ ಮನೆಯವರು ಅಟ್ಟಕ್ಕೇರಿ ನೋಡಿದಾಗ ನೇಣುಬಿಗಿದ ಸ್ಥಿತಿಯಲ್ಲಿ ದಾಮೋದರ ಅವರ ಮೃತದೇಹ ಪತ್ತೆಯಾಗಿದೆ. ಸೋಲಿನ ಭೀತಿಯಿಂದ ಹೀಗೆ ಮಾಡಿಕೊಂಡಿರಬಹುದು ಎಂಬ ವದಂತಿ ಹಬ್ಬಿದೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..