ಸಿದ್ದಾಪುರದಲ್ಲಿ ಹಮ್ಮಿಕೊಂಡಿದ್ದ ಮತದಾರರ ವಿಶೇಷ ನೊಂದಣಿ ಅಭಿಯಾನ ಕಾರ್ಯಕ್ರಮಕ್ಕೆ ತಾಪಂ ಎಡಿ ವೈ. ವನಜಾ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷೆ ಹಸೀನಾ ಬೇಗಂ, ಸದಸ್ಯರಾದ ಪ್ರಿಯಾಂಕಾ ಹೊನ್ನೂರಪ್ಪ, ಅಜೀಹುದ್ದಿನ್ ಇದ್ದರು.  
ಜಿಲ್ಲೆ

ಪದವೀಧರರು ಹೆಸರು ನೋಂದಾಯಿಸಿ

Kopala - Desk - Eraveni

ಸಿದ್ದಾಪುರ: ಈಶಾನ್ಯ ಪದವೀಧರರ ಕ್ಷೇತ್ರ ಚುನಾವಣೆ ಜರುಗಲಿದ್ದು, ಪದವಿ ಪಡೆದವರು ನಮೂನೆ-18ರಲ್ಲಿ ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳನ್ನು ನೀಡಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿ ಎಂದು ತಾಪಂ ಎಡಿ ವೈ.ವನಜಾ ಹೇಳಿದರು.

ಗ್ರಾಮದಲ್ಲಿ ಸೋಮವಾರ ತಾಲೂಕು ಸ್ವೀಪ್ ಸಮಿತಿ ಹಾಗೂ ಗ್ರಾಪಂಯಿಂದ ಹಮ್ಮಿಕೊಂಡಿದ್ದ ಮತದಾರರ ವಿಶೇಷ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪದವಿ ಅಂಕಪಟ್ಟಿ, ಮತದಾರ ಗುರುತಿನ ಚೀಟಿ, ವಾಸಸ್ಥಳ, ಎರಡು ಭಾವಚಿತ್ರ, ಆಧಾರ್ ಪ್ರತಿ ದಾಖಲೆಗಳೊಂದಿಗೆ 2023 ನ. 6ರೊಳಗೆ ಅರ್ಜಿ ಸಲ್ಲಿಸಬೇಕು. 2020ರ ನ.1ಕ್ಕಿಂತ ಮುಂಚೆ ಪದವಿ ಮುಗಿಸಿದವರೂ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ಮತದಾನ ನಮ್ಮ ಹಕ್ಕಾಗಿದ್ದು, ಪ್ರತಿಯೊಬ್ಬ ಪದವೀಧರರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಸಿದ್ದಾಪುರ ಉಪ ತಹಶೀಲ್ದಾರ್ ಪ್ರಕಾಶ ನಾಯಕ ಮಾತನಾಡಿ, ಮತದಾರರ ವಿಶೇಷ ನೋಂದಣಿ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲು ಈ ಆಂದೋಲನ ಹಮ್ಮಿಕೊಳ್ಳಲಾಗಿದೆ. ನೋಂದಣಿ ಪ್ರಕ್ರಿಯೆಯಿಂದ ಯಾರು ವಂಚಿತರಾಗಬಾರದು. ನಮ್ಮ ಹಕ್ಕು ಹಾಗೂ ಕರ್ತವ್ಯಗಳನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಬೇಕು ಎಂದರು.

ಜಾಗೃತಿ ಜಾಥಾ ಗ್ರಾಮದ ಪಂಚಾಯತ ಕಾರ್ಯಾಲಯದಿಂದ ಪ್ರಾರಂಭವಾಗಿ ಬಸವೇಶ್ವರ ವೃತ್ತ ಮಾರ್ಗವಾಗಿ, ಬಸ್ ನಿಲ್ದಾಣದ ಕಡೆ ತೆರಳಿ ಪದವಿ ಮುಗಿಸಿದವರು ಕಡ್ಡಾಯವಾಗಿ ನೋಂದಣಿ ಮಾಡಿಸುವಂತೆ ನಿಲ್ದಾಣದಲ್ಲಿದ್ದ ಪ್ರಯಾಣಿಕರಿಗೆ ಜಾಗೃತಿ ಮೂಡಿಸಿದರು.

ಗ್ರಾಪಂ ಅಧ್ಯಕ್ಷೆ ಹಸೀನಾ ಬೇಗಂ, ಸದಸ್ಯರಾದ ಪ್ರಿಯಾಂಕಾ ಹೊನ್ನೂರಪ್ಪ, ಅಜೀಹುದ್ದಿನ್, ಕಂದಾಯ ನೀರಿಕ್ಷಕ ಶರಣಪ್ಪ, ಕಾರ್ಯದರ್ಶಿ ಮಹೆಬೂಬ್ ಸಾಬ್, ಐಇಸಿ ಸಂಯೋಜಕ ಸೋಮನಾಥ ಇದ್ದರು.