ಜಿಲ್ಲೆ

ಮಣ್ಣನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ -ಈಶ್ವರ ಕಾಂದೂ

ಕಾರವಾರ:ದೇಶವನ್ನು ಯೋಧ ಕಾಪಾಡಿದರೆ ಈ ದೇಶದ ಮಣ್ಣನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂಬುದನ್ನು ಪ್ರತಿಯೊಬ್ಬರು ಅರಿತು ಭೂ ತಾಯಿಯ ರಕ್ಷಣೆಗೆ ಮುಂದಾಗೋಣ ಎಂದು ಜಿಲ್ಲಾ ಪಂಚಾಯಿತಿ ಸಿಇಇ ಈಶ್ವರ ಕಾಂದೂ ಹೇಳಿದರು.
ತಾಲೂಕಿನ ಅಸ್ನೋಟಿ ಗ್ರಾಮದ ಶಿವಾಜಿ ವಿದ್ಯಾ ಮಂದಿರದಲ್ಲಿ ಸ್ಥಳೀಯ ಗ್ರಾಪಂ ಲಯನ್ಸ್ ಕ್ಲಬ್ ಸದಾಶಿವಗಡ ಸಹಯೋಗದಲ್ಲಿ ನಡೆದ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ನಡೆದ `ಮೇರಿ ಮಾಟಿ ಮೇರಾ ದೇಶ" ಅಭಿಯಾನಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಮಣ್ಣು, ಸಸ್ಯ ಹಾಗೂ ನೀರಿನ ಅಗತ್ಯವನ್ನು ಅರಿತು ರಕ್ಷಣೆ ಮಾಡಲು ಮುಂದಾದಾಗ ಮಾತ್ರ ಪ್ರಗತಿಯನ್ನು ಸಾಧಿಸಬಹುದು ಎಂದರು.

ತಾಪಂ ಇಒ ಆನಂದಕುಮಾರ್ ಬಾಲಪ್ಪನವರ್,ಅಸ್ನೋಟಿ ಗ್ರಾಮ ಪಂಚಾಯಿತಿ ಪ್ರಗತಿಪರ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸದಾ ಮುಂಚೂಣಿಯಲ್ಲಿರುತ್ತದೆ ಎಂದರು ಎಂದು. ನೌಕಾನಲೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಮೋಹನ್ ಸಾಳುಂಕೆ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಇದನ್ನೂ ಓದಿ:ವಿನಯಾ ವಿನೋದ ನಾಯ್ಕ ಅವರಿಗೆ ಲಯನ್ಸ್‌ ಕ್ಲಬ್‌ನ ಶ್ರೇಷ್ಠ ಅಧ್ಯಕ್ಷೆ ಪ್ರಶಸ್ತಿ
ಗ್ರಾಪಂ ಅಧ್ಯಕ್ಷ ಸಂಜಯ ಸಾಳುಂಕೆ, ಶಿವಾಜಿ ಮಹಾವಿದ್ಯಾಲಯದ ಪ್ರಾಚಾರ್ಯೆ ಸುಮನ್ ಸಾವಂತ್, ವಲಯ ಅರಣ್ಯಾಧಿಕಾರಿ ಗಜಾನನ ನಾಯ್ಕ, ಶಿವಾಜಿ ವಿದ್ಯಾ ಮಂದಿರದ ಮುಖ್ಯಾಧ್ಯಪಕ ದಿನೇಶ ಗಾಂವಕರ್, ನರೇಂದ್ರ ದೇಸಾಯಿ, ಜಿ.ಆರ್ ಪ್ರಭು, ಪಿಡಿಒ ವಿದ್ಯೇಶ್ವರಿ ನಾಯ್ಕ, ಗಣೇಶ ಬಿಷ್ಠಣ್ಣನವರ್ ಕಾರ್ಯಕ್ರಮ ನಿರೂಪಿಸಿದರು.