ಬೆಂಗಳೂರು: ಹೋಟೆಲ್ಗಳಿಗೆ ಉದ್ಯಮ ಮಾನ್ಯತೆ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಹೋಟೆಲ್ಗಳ ಸಂಘ ಅರಮನೆ ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಹೋಟೆಲ್ ಮಾಲೀಕರ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೋಟೆಲ್ಗಳನ್ನು ಬರೀ ಉದ್ಯಮವೆಂದು ಕರೆಯಲಾಗುತ್ತಿದೆ. ಆದರೆ, ಇದು ಕಾರ್ಯರೂಪಕ್ಕೆ ಬಂದಿಲ್ಲ.ಹೋಟೆಲ್ಗಳಿಗೆ ಉದ್ಯಮವೆಂದು ಮಾನ್ಯತೆ ನೀಡುವುದಕ್ಕೆ ಸರ್ಕಾರ ಮುಂದಾಗುತ್ತಿದೆ. ಈ ಬಗ್ಗೆ ಪ್ರವಾಸೋದ್ಯಮ ಸಚಿವರ ಜತೆ ಈಗಾಗಲೇ ಚರ್ಚೆ ನಡೆಸಿದ್ದೇನೆ. ಹೋಟೆಲ್ ಉದ್ದಿಮೆಗಳು ಲಕ್ಷಾಂತರ ಉದ್ಯೋಗ ಸೃಷ್ಟಿ ಮಾಡಿವೆ. ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಉಡುಪಿ ಬ್ರ್ಯಾಂಡ್ ಹೋಟೆಲ್ಗಳಿವೆ. ಉತ್ತರ ಕರ್ನಾಟಕ ಖಾನಾವಳಿ ಹೋಟೆಲ್ಗಳಿವೆ. ಇವುಗಳನ್ನು ಉಳಿಸಿ ಬೆಳೆಸಲು ನಮ್ಮ ಆದ್ಯತೆಯಾಗಿದೆ ಎಂದರು.
2024ರಿಂದ 2026ರವರೆಗಿನ ಮಾರ್ಗಸೂಚಿ ಬಿಡುಗಡೆ ಮಾಡಲಾಯಿತು. ಹೋಟೆಲ್ ಉದ್ದಿಮೆ ಎದುರಿಸುತ್ತಿರುವ ಸಮಸ್ಯೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಹೋಟೆಲ್ ಉದ್ದಿಮೆದಾರರಾದ ಡಾ.ಕೆ. ಪ್ರಕಾಶ್ ಶೆಟ್ಟಿ, ಆರ್.ಆರ್. ರಮಣರೆಡ್ಡಿ, ಎಂ.ರಾಜೇಂದ್ರ, ಬಿ.ಚಂದ್ರಶೇಖರ ಹೆಬ್ಬಾರ್ ಅವರನ್ನು ಸನ್ಮಾನಿಸಲಾಯಿತು. ಶಾಸಕ ಪಿ.ಸುರೇಶ್ ಶೆಟ್ಟಿ,ಸಂದ ಅಧ್ಯ ಜಿ.ಕೆ.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾವೇಂದ್ರ ರಾವ್,ಮಾಜಿ ಅಧ್ಯ ಸುಧಾಕರ್ ಎಸ್. ಶೆಟ್ಟಿ, ಹೋಟೆಲ್ ಸಂದ ಜಿಲ್ಲಾವಾರು ಅಧ್ಯರು, ಉಪಾಧ್ಯರು, ಪದಾಧಿಕಾರಿಗಳು ಸೇರಿ ಮತ್ತಿತರರಿದ್ದರು.
ಕಲಬೆರಕೆ ಆಹಾರ ತಡೆಗೆ ಕ್ರಮ:
ಕಲಬೆರಕೆ ಆಹಾರ ತಡೆಗೆ ಆಹಾರ ಸುರತಾ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲಾಗಿದೆ. ಹಾಗಾಗಿ, ಅಧಿಕಾರಿಗಳು ಹೋಟೆಲ್ಗಳ ತಪಾಸಣೆ ಮಾಡುತ್ತಿದ್ದಾರೆ ಹೊರತು ಉದ್ದಿಮೆದಾರರಿಗೆ ತೊಂದರೆ ಕೊಡುತ್ತಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಗುಣಮಟ್ಟ ಆಹಾರ ಒದಗಿಸುವುದು ಹೋಟೆಲ್ಗಳ ಮಾಲೀಕರ ಕರ್ತವ್ಯ. ಸ್ವಚ್ಛತೆ ಕಾಪಾಡಿಕೊಂಡು ಗ್ರಾಹಕರಿಗೆ ಆಹಾರ ಒದಗಿಸಬೇಕು. ಕಲಬೆರಕೆ ಆಹಾರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಕಾನೂನು ಪ್ರಕಾರವೇ ಕ್ರಮ ತೆಗದುಕೊಳ್ಳಲಾಗುತ್ತಿದೆ. ನಾವೆಲ್ಲರೂ ಸೇರಿ ಕಲಬೆರಕೆ ವಿರುದ್ಧ ಅಭಿಯಾನ ನಡೆಸೋಣ ಎಂದರು.ದೇಶದ ಅನೇಕ ಮಂದಿ ಹೋಟೆಲ್ಗಳ ಉದ್ದಿಮೆಯಲ್ಲಿ ತೊಡಗಿದ್ದಾರೆ. ವಿಶೇಷವಾಗಿ ಕರಾವಳಿಯವರು ಜಗತ್ತಿನಾದ್ಯಂತ ಹೋಟೆಲ್ ಆರಂಭಿಸುವ ಮೂಲಕ ಒಳ್ಳೆಯ ಹೆಸರು ಮಾಡಿದ್ದಾರೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಲ ಹೋಟೆಲ್ಗಳಿಗೆ ತನ್ನದೆ ಇತಿಹಾಸ, ಚರಿತ್ರೆಗಳಿವೆ. ಹೋಟೆಲ್ ಮಾಲೀಕರು ಜನರಿಗೆ ಇನ್ನಷ್ಟು ಸೇವೆಗೆ ಮುಂದಾಗಬೇಕು. ಹೋಟೆಲ್ ಉದ್ಯಮ ಇನ್ನಷ್ಟು ಲಾಭದಾಯಕವಾಗಿ ನಡೆಸುವಂತಾಗಲಿ.
| ರಾಮಲಿಂಗಾರೆಡ್ಡಿ. ಸಚಿವ