ಹನುಮಸಾಗರದ ಗ್ರಾಪಂ ಉಪಾಧ್ಯಕ್ಷರಾಗಿ ಗೌರಮ್ಮ ವಾಲ್ಮೀಕಿ ಅವಿರೋಧ ಆಯ್ಕೆಯಾದರು. ಚುನಾವಣಾಧಿಕಾರಿಗಳಾದ ದಾದಾಪೀರ, ಜಗದೀಶ ಸೂಡಿ, ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಇತರರಿದ್ದರು. 
ಜಿಲ್ಲೆ

ಹನುಮಸಾಗರ ಗ್ರಾಪಂಗೆ ಗೌರಮ್ಮ ಮುದಿಯಪ್ಪ ಉಪಾಧ್ಯಕ್ಷೆ

ಹನುಮಸಾಗರ: ಇಲ್ಲಿನ ಗ್ರಾಪಂಗೆ ನೂತನ ಉಪಾಧ್ಯಕ್ಷರಾಗಿ ಗೌರಮ್ಮ ಮುದಿಯಪ್ಪ ವಾಲ್ಮೀಕಿ ಶನಿವಾರ ಅವಿರೋಧ ಆಯ್ಕೆಯಾದರು.

ಈ ಹಿಂದೆ ಉಪಾಧ್ಯಕ್ಷೆಯಾಗಿದ್ದ ಹನುಮಮ್ಮ ಕಂದಗಲ್ ಅವರು ಹೃದಯಾಘಾತದಿಂದ ನಿಧನರಾಗಿದ್ದರಿಂದ ಉಪಚುನಾವಣೆ ನಿಗದಿಪಡಿಸಲಾಗಿತ್ತು. ನಾಮಪತ್ರ ಹಿಂಪಡೆಯಲು ಶನಿವಾರ ಕೊನೇ ದಿನವಾಗಿತ್ತು. ಗೌರಮ್ಮ ವಾಲ್ಮೀಕಿ ಹಾಗೂ ನಿಂಗಮ್ಮ ಕಂದಗಲ್ ನಾಮಪತ್ರ ಸಲ್ಲಿಸಿದ್ದರು. ನಿಂಗಮ್ಮ ಕಂದಗಲ್ ನಾಮಪತ್ರವನ್ನು ಹಿಂಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಗೌರಮ್ಮ ಅವಿರೋಧ ಆಯ್ಕೆಗೊಂಡರು. ಚುನಾವಣಾಧಿಕಾರಿಗಳಾಗಿ ದಾದಾಪೀರ, ಜಗದೀಶ ಸೂಡಿ ಕಾರ್ಯ ನಿರ್ವಹಿಸಿದರು.