ಪುತ್ತೂರು ಗ್ರಾಮಾಂತರ: ಕೆಯ್ಯೂರು ಗ್ರಾಮದ ಮಹಿಷಮರ್ದಿನಿ-ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ಗೊನೆ ಮುಹೂರ್ತದೊಂದಿಗೆ ವಾರ್ಷಿಕ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು.
ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ರಾವ್ ಪೂಜೆ ಸಲ್ಲಿಸಿ, ಗೊನೆ ಮುಹೂರ್ತ ನೆರವೇರಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎ.ಕೆ.ಜಯರಾಮ ರೈ ಕೆಯ್ಯೂರು, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಳ, ಎಸ್.ಬಿ.ಜಯರಾಮ ರೈ ಬಳಜ್ಜ, ಚೆನ್ನಪ್ಪ ರೈ ದೇರ್ಲ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಉಮಾಕಾಂತ್ ಬೈಲಾಡಿ, ಕೆ.ಎಸ್.ಚಂದ್ರಶೇಖರ ಪೂಜಾರಿ ಕಣಿಯಾರು, ಅಶೋಕ ರೈ ದೇರ್ಲ, ದಾಮೋದರ ಪೂಜಾರಿ ಕೆಂಗುಡೇಲು, ಹರಿನಾಥ ನಾಯ್ಕ ಇಳಂತಾಜೆ, ಸುಜಯ ಕೆಯ್ಯೂರು, ಮಾಜಿ ಸದಸ್ಯರಾದ ಎನ್.ದಿವಾಕರ ರೈ ಸಣಂಗಳ, ಇ.ಸಂತೋಷ್ ಕುಮಾರ್ ರೈ ಇಳಂತಾಜೆ, ರಾಮಣ್ಣ ಗೌಡ ಮಾಡಾವು, ಕೆಯ್ಯೂರು ಗ್ರಾ.ಪಂ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಜಾತ್ರೋತ್ಸವ ಉಪ ಸಮಿತಿಗಳ ಸಂಚಾಲಕರಾದ ಜಯಂತ ಪೂಜಾರಿ ಕೆಂಗುಡೇಲು, ಬೇಬಿ ಪೂಜಾರಿ ದೇರ್ಲ, ದೇವಣ್ಣ ನಾಯ್ಕ, ರಾಮಕೃಷ್ಣ ಭಟ್ ಮೇರ್ಲ, ಆನಂದ ರೈ ದೇವಿನಗರ, ಆದರ್ಶ್ ರೈ ಕೆಯ್ಯೂರು ಮತ್ತಿತರರು ಉಪಸ್ಥಿತರಿದ್ದರು.