ಜಿಲ್ಲೆ

ಬೆಸ್ಟ್ ಫಿಸಿಕ್‌ನಲ್ಲಿ ಆಳ್ವಾಸ್‌ನ ಕಿಶನ್ ಶೆಟ್ಟಿಗೆ ಚಿನ್ನದ ಪದಕ

ಸೌಮ್ಯ ಆರ್

ಮೂಡುಬಿದಿರೆ: ಎರ್ನಾಕುಲಂನ ಶ್ರೀ ಶಂಕರ ಆಚಾರ್ಯ ವಿಶ್ವವಿದ್ಯಾಲಯ ಆಶ್ರಯದಲ್ಲಿ ನಡೆದ ಅಖಿಲ ಭಾರತ ಅಂತರ್ ವಿ.ವಿ. ಬೆಸ್ಟ್ ಫಿಸಿಕ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾಲಯ ಪ್ರತಿನಿಧಿಸಿದ್ದ ಆಳ್ವಾಸ್ ಕಾಲೇಜಿನ ಕಿಶನ್ ಶೆಟ್ಟಿ 90 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಅಂತರ್ ಕಾಲೇಜು ಬೆಸ್ಟ್ ಫಿಸಿಕ್ ಚಾಂಪಿಯನ್‌ಶಿಪ್‌ನಲ್ಲಿ ಮಿಸ್ಟರ್ ಮಂಗಳೂರು ಯುನಿರ್ವಸಿಟಿ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು. ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ.