ಜಿಲ್ಲೆ

ಅಮೃತಭಾರತಿ ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ

ಇಂದಿರಾ ಎನ್ ಕೆ

ಹೆಬ್ರಿ: ಬೆಂಗಳೂರಿನ ಭಾರತ ಸಂಸ್ಕೃತಿ ಪ್ರತಿಷ್ಠಾನದಿಂದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಮಾಯಣ ಮಹಾಭಾರತ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಹೆಬ್ರಿಯ ಪಿಆರ್‌ಎನ್ ಅಮೃತಭಾರತಿ ವಿದ್ಯಾಕೇಂದ್ರದ ಹತ್ತು ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ, ಪ್ರಶಸ್ತಿ ಪತ್ರ ಪ್ರದಾನ ಸಮಾರಂಭ ಸಂಸ್ಥೆಯಲ್ಲಿ ಬುಧವಾರ ನಡೆಯಿತು.

ಪ್ರಣವ್ ಹೆಬ್ಬಾರ್, ಕೃಷ್ಣಪ್ರಸಾದ್ ಭಟ್, ಆಯುಷ್ ಆರ್., ಶ್ರೀಗೌರಿ ಪಿ.ಕೆ., ಅಕ್ಷೋಭ್ಯ, ಸಿಂಚನಾ ಶೆಟ್ಟಿ, ಅಕ್ಷರ ಆರ್.ಭಟ್, ಸಿದ್ಧಾರ್ಥ್ ರಾವ್, ಸುಜಿತ್, ತಸ್ವಿ ವಿ.ಕಾಂಚನ್ ಸ್ವರ್ಣ ಪದಕ ಪಡೆದರು. ಪರೀಕ್ಷೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು.

ಅಮೃತ ಭಾರತಿ ಟ್ರಸ್ಟ್ ಕಾರ್ಯದರ್ಶಿ ಗುರುದಾಸ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾದ ಪ್ರೊ.ಸುಷ್ಮಾ, ದಾನಿ ರೀನಾ ಬೀಜೂರು ಶುಭಹಾರೈಸಿದರು. ಪರೀಕ್ಷಾ ಸಂಯೋಜಕರಾದ ಸುಗೀತ, ಪ್ರತಿಮಾ ಉಪಸ್ಥಿತರಿದ್ದರು. ಅಮೃತಭಾರತಿ ವಿದ್ಯಾಕೇಂದ್ರದ ಪ್ರಾಂಶುಪಾಲ ಅರುಣ್, ಮುಖ್ಯಶಿಕ್ಷಕಿ ಅನಿತಾ ಸಿಬ್ಬಂದಿ  ಉಪಸ್ಥಿತರಿದ್ದರು.