ಹನುಮಸಾಗರದ ಎಸ್ಸಿ ಕಾಲನಿಯಲ್ಲಿ ಮಂಗಳಮ್ಮ, ದುರ್ಗಾ, ಕೆಂಚಮ್ಮ ದೇವಿಯರ ಅಡ್ಡಪಲ್ಲಕ್ಕಿ ಉತ್ಸವ ಜರುಗಿತು. 
ಜಿಲ್ಲೆ

ದೇವಿಯರ ಅಡ್ಡಪಲ್ಲಕ್ಕಿ ಉತ್ಸವ ಅದ್ದೂರಿ

ಹನುಮಸಾಗರ: ಪಟ್ಟಣದ ಎಸ್ಸಿ ಕಾಲನಿಯ ಮಂಗಳಮ್ಮ ದೇವಿ, ದುರ್ಗಾದೇವಿ ಹಾಗೂ ಕೆಂಚಮ್ಮ ದೇವಿಯರ ಅಡ್ಡಪಲ್ಲಕ್ಕಿ ಉತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.

ಪಲ್ಲಕ್ಕಿ ಉತ್ಸವದ ನಿಮಿತ್ತ ದೇವಸ್ಥಾನದಲ್ಲಿ ವಿಶೇಷ ಪೂಜೆ ಸೇರಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ನಂತರ ಪ್ರತಿ ಬೀದಿಗಳಲ್ಲಿ ಕಳಸ ಹಾಗೂ ಸಕಲವಾದ್ಯ ವೈಭವಗಳೊಂದಿಗೆ ಅಡ್ಡಪಲಕ್ಕಿ ಉತ್ಸವ ಜರುಗಿತು. ಪ್ರಮುಖರಾದ ಚಂದ್ರು ಹಿರೇಮನಿ, ಸೋಮಪ್ಪ ಹೊಸಮನಿ, ಚಂದಪ್ಪ ಗುಡಗಲದಿನ್ನಿ, ನೀಲಕಂಠಪ್ಪ ಪೂಜಾರ,

ರಜಿನಿಕಾಂತ್ ಸಂದಿಮನಿ, ನೀಲಪ್ಪ ಕುದರಿ, ಹನುಮಂತ ಪೂಜಾರ, ದುರಗಪ್ಪ ಇಲಕಲ್, ಮಂಗಳೇಶ ಗುಮಗೇರಿ, ಹನುಮಂತ ಹಾದಿಮನಿ, ಶೇಖಪ್ಪ ಸಂದಿಮನಿ, ಮಂಗಳೇಶ ಹಿರೇಮನಿ, ಸುಭಾಷ ಗುಮಗೇರಿ, ಶ್ರೀನಿವಾಸ ಇಲಕಲ್, ಹುಸೇನಪ್ಪ ಇಳಕಲ್, ಪರಶುರಾಮ ಗುಡಿಮನಿ, ಶಿವಾನಂದ ಪೂಜಾರ, ಚಂದ್ರಶೇಖರ ಪೂಜಾರ ಇತರರಿದ್ದರು.