ಬೆಂಗಳೂರು: ಸಂಗೀತದಿಂದ ಭಗವಂತನ ಸಾಕ್ಷಾತ್ಕಾರವಾಗುತ್ತದೆ ಎಂದು ಹಿರಿಯ ತಬಲ ವಾದಕ ಪಂಡಿತ್ ಡಾ. ಸತೀಶ್ ಹಂಪಿಹೊಳಿ ಹೇಳಿದ್ದಾರೆ.
ಶ್ರೀ ದತ್ತ ಜಯಂತಿ ಉತ್ಸವ ಅಂಗವಾಗಿ ಶ್ರೀ ಗುರು ಸಮರ್ಥ ಸಂಗೀತ ವಿದ್ಯಾಲಯವು ತ್ಯಾಗರಾಜನಗರದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಆಯೋಜಿಸಿದ್ದ ‘ಸಂಗೀತ ಸಂಜೆ’ ಕಾರ್ಯಕ್ರಮದಲ್ಲಿ ಸಂಗೀತದ ಮಹತ್ವ ಹಾಗೂ ಅದರ ಕಲಿಕೆಯಿಂದ ಆಗುವ ಉಪಯೋಗಗಳು ಕುರಿತು ವಿವರಿಸಿದರು.
ತಾಳವಾದ್ಯ ಕಲಾವಿದ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮಾ ಮಾತನಾಡಿ, ವಿದ್ಯಾರ್ಥಿಗಳು ಸಂಗೀತ ಕಲಿಯುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ಮನಸ್ಸಿಗೆ ನೆಮ್ಮದಿ ದಕ್ಕುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಚಿ. ವೆಂಕಟ್ ನಿತಿನ್, ಉಮಾ ಕುಲಕರ್ಣಿ, ರಶ್ಮಿ ಶಶಿಧರ್, ಶಿವರಂಜನಿ, ಸಂಧ್ಯಾ, ಲಿಪಿಕಾ ಭಕ್ತಿ ಸಂಗೀತ ನಡೆಸಿಕೊಟ್ಟರು. ಇದೇ ವೇಳೆ ವಿದ್ಯಾಲಯದ ವಿದ್ಯಾರ್ಥಿಗಳಿಂದ ತಬಲ ತರಂಗ್ ವಾದನ ಏರ್ಪಡಿಸಲಾಗಿತ್ತು.
ದತ್ತಾತ್ರೇಯ ದೇವಸ್ಥಾನದ ಕಾರ್ಯದಶಿ ಎನ್.ಎಲ್. ಶ್ರೀಪಾದ. ವಿದ್ಯಾಲಯದ ಅಧ್ಯಕ್ಷ ಪಂಡಿತ್ ಅಮೃತೇಶ್ ಕುಲಕರ್ಣಿ ಇತರರಿದ್ದರು.